

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಬೆಂಗಳೂರು ಮತ್ತು ಪಿಸಿಸಿ, ಕಲಬುರ್ಗಿ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.
ಸಂಸ್ಥೆಯು ಗ್ರೂಪ್ ‘ಎ’, ‘ಬಿ’, ಮತ್ತು ’ಸಿ’ ವೃಂದದಲ್ಲಿ ಖಾಲಿ ಇರುವ 587 ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲು ಆಡಳಿತಾತ್ಮಕ ಅನುಮೋದನೆ ಕೋರಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಮೊದಲ ಹಂತದಲ್ಲಿ ಭರ್ತಿ ಮಾಡಿಕೊಳ್ಳಲು ಪ್ರಸ್ತಾಪಿಸಿರುವ 425 ಹುದ್ದೆಗಳ ಪೈಕಿ 413 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ ಎಲೆಕ್ಟ್ರಿಷಿಯನ್ ಮತ್ತು ಬಯೋ ಮೆಡಿಕಲ್ ಇಂಜಿನಿಯರ್ ಹುದ್ದೆಗಳಿಗೆ ತಲಾ ಒಬ್ಬರಂತೆ, ಎರಡು ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಆದರೆ, ಇದಕ್ಕೆ ಕೆಲ ಸಲಹೆ ನೀಡಿಕೆಯೊಂದಿಗೆ ಷರತ್ತುಗಳನ್ನು ವಿಧಿಸಿದೆ.