ಮೈಸೂರಿನಲ್ಲಿ ಮಗು ಅಪಹರಣ : ಕೇವಲ 4 ಗಂಟೆಯಲ್ಲಿ ಐವರು ಆರೋಪಿಗಳ ಬಂಧನ

manjunatha
ಪ್ರಮುಖ ಆರೋಪಿ ಮಂಜುನಾಥ
Published on

ಮೈಸೂರು: ಮಿಂಚಿನ ಕಾರ್ಯಾಚರಣೆ ನಡೆಸಿದ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಾದ ಕೇವಲ 4 ಗಂಟೆಯಲ್ಲಿ ಮಗುವನ್ನು ಅಪಹರಿಸಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೂಟಗಳ್ಳಿಯ ದೊಡ್ಡಅರಳೀಮರದ ಮಂಜುನಾಥ, ಇಲವಾಲ ಹೋಬಳಿಯ ನಾಗವಾಲದ ಇಂದ್ರಕುಮಾರ್, ಪಾಂಡವಪುರ ತಾಲೂಕಿನ ಡಾಬರಹಳ್ಳಿಯ ಕುಮಾರ್, ಇಲವಾಲ ಹೋಬಳಿಯ ನಾಗವಾಲದ ಸುಪ್ರಿಯಾ ಹಾಗೂ ವಿಜಯಲಕ್ಷ್ಮೀ ಬಂಧಿತರು.

ಹಿನಕಲ್ ವರ್ತುಲ ರಸ್ತೆಯ ಜೋಪಡಿಯಲ್ಲಿ ಬುಧವಾರ ಬೆಳಗ್ಗೆ 3ಕ್ಕೆ ಬಿಹಾರದ ಅಲೆಮಾರಿ ಸಮುದಾಯದ ಎಲ್ಲರು ಮಲಗಿರುವ ಸಂದರ್ಭ 40 ದಿನದ ಗಂಡು ಮಗುವನ್ನು ಆರೋಪಿಗಳು ಅಪಹರಿಸಿದ್ದರು. ಈ ಕುರಿತು ಮಗುವಿನ ತಾಯಿ ರಾಮಡಲ್ಲಿ ದೇವಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತ ಮುತ್ತುರಾಜ್, ವಿಜಯನಗರ ಉಪ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ಉಸ್ತುವಾರಿಯಲ್ಲಿ ವಿಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಆರ್. ಪ್ರದೀಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ವಿಶ್ವನಾಥ, ಕೆ.ನಾರಾಯಣ, ವನಜಾಕ್ಷಿ, ಸಿಬ್ಬಂದಿ ಶಿವಕುಮಾರ್, ಲಿಖಿತ್, ಮುರುಳಿಗೌಡ, ಸಂಜಯ್, ಅಣ್ಣಪ್ಪ ದೇವಾಡಿಗ, ನಂದೀಶ್, ಶ್ರೀನಿವಾಸಮೂರ್ತಿ, ಪ್ರಭಾಕರ್, ಸಿಡಿಆರ್ ಕುಮಾರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net