Kidnap Case ಮುಂಡಗೋಡ ವ್ಯಕ್ತಿ ಅಪಹರಣ 4 ಜನರ ಬಂಧನ

Kidnap case
Published on

ಮುಂಡಗೋಡ: ಪಟ್ಟಣದ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿಕೊಂಡು (Kidnap Case) ಹೋಗಿದ್ದ ನಾಲ್ಕು ಜನ ಆರೋಪಿಗಳನ್ನು ಪೊಲೀಸರು 15 ತಾಸಿನ ಒಳಗೇ ಗೋಕಾಕ್ ನಲ್ಲಿ ಬಂಧಿಸಿದ್ದಾರೆ.

ಪಟ್ಟಣದ ಜಮೀರಅಹ್ಮದ್ ದರ್ಗಾವಾಲೆ ಎಂಬವನೆ ಅಪಹರಣಕ್ಕೆ ಒಳಗಾದ ವ್ಯಕ್ತಿಯಾಗಿದ್ದ ಈತ ತಾಲೂಕು ಕ್ರೀಡಾಂಗಣದಿಂದ ಮಾದರಿ ಶಾಲೆಯ ಮುಂಭಾಗದ ಮಾರ್ಗವಾಗಿ ಬೈಕ್ ನಂಬರ್ ಕೆಎ.31.ಇಇ.7668ಮೇಲೆ ಮನೆಗೆ ತೆರಳುತ್ತಿರುವಾಗ ಯಾರೋ ಬಿಳಿ ಬಣ್ಣದ ಕಾರ್ ನಲ್ಲಿ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದ್ದು ಬೈಕ್ ನಿಂದ ಕೆಳಗೆ ಬಿದ್ದ ಜಮೀರ್ ಅಹ್ಮದ್ ಮೇಲೆ ಹಲ್ಲೆ ನಡೆಸಿ ಕಾರ್ ನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ.K

Kidnap case

ನಂತರ ಬಂಕಾಪುರ ಮಾರ್ಗವಾಗಿ ಗದಗ ರಿಂಗ್ ರೋಡ್ ಗೆ ಕರೆದುಕೊಂಡು ಹೋಗಿ ಜಮೀರ್ ನ ಮುಖಕ್ಕೆ ಬಟ್ಟೆ ಹಾಕಿ ಹಲ್ಲೆ ನಡೆಸಿ ಬಿಟ್ಟು ಹೋಗಿದ್ದರು.

ಸದ್ಯ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಜಮೀರ್ ಗೆ ಚಿಕಿತ್ಸೆ ನೀಡಲಾಗುತ್ತಿದ್ದು ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದರು.

ಶಿರಸಿ ಡಿವೈಎಸ್ ಪಿ ಗಣೇಶ ಕೆ.ಎಲ್   ಸಿಪಿಐ.ರಂಗನಾಥ್ ನೀಲಮ್ಮನವರ್. ಪಿಎಸ್ಐ.ಪರಶುರಾಮ್ ಮಿರ್ಜಿಗಿ, ಹಾಗೂ ಸಿಬ್ಬಂದಿಗಳು ನಾಲ್ಕು ಜನ ಆರೋಪಿಗಳನ್ನು ಗೋಕಾಕ್ ನಲ್ಲಿ ಬಂಧಿಸಿ ಮುಂಡಗೋಡ ಠಾಣೆಗೆ ಕರೆತರುತಿದ್ದಾರೆ. Kidnap Case

ಕಿಡ್ನಾಪ್ ಆದ ವ್ಯಕ್ತಿಯ ಸಂಬಂಧಿಕರಿಗೆ ಕರೆ ಮಾಡಿದ ಆರೋಪಿತರು 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಅವರು 18 ಲಕ್ಷ. ರೂ.ಕೊಟ್ಟಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net