ಸ್ವಸ್ಥ ಸಮಾಜ ಸರ್ವರ ಕರ್ತವ್ಯ

04-12kod01
Published on

ಕೊಡೇಕಲ್: ಮಕ್ಕಳು ಯೋಗ, ಧ್ಯಾನ, ಪೌಷ್ಟಿಕ ಆಹಾರ ಮತ್ತು ಸ್ವಚ್ಛತೆಯತ್ತ ಗಮನ ಹರಿಸಿ, ಆರೋಗ್ಯಯುತ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ವೈದ್ಯ ಡಾ.ಮೋಹನ ಕೋರಿ ಹೇಳಿದರು.

ರಾಜನಕೊಳ್ಳೂರ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ವಸತಿ ಶಾಲೆಗಳಲ್ಲಿ ಅಧ್ಯಯನ ಮಾಡುವ ಮಕ್ಕಳ ಆರೋಗ್ಯಕ್ಕೆ ಒತ್ತು ನೀಡಬೇಕು ಎಂದರು.

ಹೆಣ್ಣು ಮಕ್ಕಳು ಆರೋಗ್ಯದ ಬಗ್ಗೆ ನಿರ್ಲಕ್ಷಿಸುವಂತಿಲ್ಲ. ಮುಖ್ಯವಾಗಿ ಋತುಚಕ್ರದ ವೇಳೆ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕು. ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಒಬ್ಬರು ಬಳಸಿದ ಸಾಬೂನು, ವಸ್ತಗಳನ್ನು ಮತ್ತೊಬ್ಬರು ಬಳಸಬಾರದು. ಆಹಾರದಲ್ಲಿ ನಿತ್ಯ ಪೌಷ್ಟಿಕಾಂಶವುಳ್ಳ ಸತ್ವಯುತ ಆಹಾರ ಸೇವನೆಯಿಂದ ದೈಹಿಕ ಬೆಳವಣಿಗೆ ಜತೆಗೆ ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಸಯಕ್ಕೆ ಸರಿಯಾಗಿ ನಿದ್ದೆ, ಊಟ ಮಾಡಬೇಕು. ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಉತ್ತಮ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು. ಪ್ರಾಚಾರ್ಯ ಮಾನಪ್ಪ ಸತ್ಯ ಮಾತನಾಡಿ, ವಸತಿ ಶಾಲೆಯೂ ಮಕ್ಕಳಿಗೆ ಉತ್ತಮ ಮೌಲ್ಯಯುತ ಶಿಕ್ಷಣ ನೀಡುವ ಜತೆಗೆ ಆರೋಗ್ಯದತ್ತ ಪ್ರಾಮುಖ್ಯತೆ ನೀಡುತ್ತಿದೆ ಎಂದರು.

ಮಹಾದೇವಿ ಪಾಟೀಲ್, ಶಿವಲೀಲಾ, ಬಸಯ್ಯಸ್ವಾಮಿ ಯಾಳಗಿ, ಮೌನೇಶ, ಬಸವರಾಜ ಕೋಲಾರ, ಮೀನಾಕ್ಷಿ, ಸಿದ್ದಲಿಂಗಮ್ಮ ಇತರರಿದ್ದರು. ಸಂಗನಬಸ್ಸು ಪಂಜಗಲ್ ನಿರೂಪಣೆ ಮಾಡಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net