ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ

rachana menasagi
Published on

ಹುಬ್ಬಳ್ಳಿ: ಗದಗ ಜಿಲ್ಲೆ ರೋಣ ತಾಲೂಕಿನ ಮಲ್ಲಾಪುರ ಗ್ರಾಮದ ಎರಡೂವರೆ ವರ್ಷದ ಬಾಲಕಿ ರಚನಾ ಮೆಣಸಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ ಪಡೆದಿದ್ದಾಳೆ.

ಏಳು ಬಣ್ಣಗಳು, ಹತ್ತು ಹಣ್ಣುಗಳು, ಪ್ರಾಣಿಗಳು, ತರಕಾರಿಗಳು, ಪಕ್ಷಿಗಳು, ವಾಹನಗಳು, ಹದಿನೈದು ಆಕಾರಗಳು, ಕನ್ನಡ-ಹಿಂದಿ ಭಾಷೆಯ 49 ಅಕ್ಷರಗಳು, ಇಂಗ್ಲಿಷ್ ಭಾಷೆಯ 26 ಅಕ್ಷರಗಳನ್ನು ಗುರುತಿಸಿ ಪಟಪಟನೇ ಹೇಳುತ್ತಾಳೆ. ನಮ್ಮ ದೇಶಕ್ಕೆ ಸಂಬಂಧಿಸಿದ 50ಕ್ಕೂ ಹೆಚ್ಚು ಸಾಮಾನ್ಯ ಜ್ಞಾನದ ಪ್ರಶ್ನೆಗೆ ಉತ್ತರ ನೀಡಬಲ್ಲಳು. ಕನ್ನಡ-ಇಂಗ್ಲಿಷ್-ಹಿಂದಿ ಭಾಷೆಯ 1ರಿಂದ 30 ಅಂಕಿಗಳನ್ನು ಗುರುತಿಸಿ ಹೇಳುತ್ತಾಳೆ.

ತಿರ್ಲಾಪುರ ಗ್ರಾಮೀಣ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ದೈಹಿಕ ಶಿಕ್ಷಕ ಸಂಗಮೇಶ ಮೆಣಸಗಿ ಹಾಗೂ ಗಣಿತ ಶಿಕ್ಷಕಿ ಕವಿತಾ ಅವರ ಪುತ್ರಿಯಾಗಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net