ಅಮೃತ್​ ನೋನಿ ಪೇನ್​ ಆಯಿಲ್ ಅನಾವರಣಗೊಳಿಸಲಿದ್ದಾರೆ ಕಿಚ್ಚ ಸುದೀಪ್​

Untitled-2
Published on

ಬೆಂಗಳೂರು: ಈಗಾಗಲೇ ಜನರಿಂದ ಸಾಕಷ್ಟು ಬಳಸಲ್ಪಟ್ಟು ಜನಪ್ರಿಯವೂ ಆಗಿರುವ ಅಮೃತ್​ ನೋನಿಯಿಂದ ಇದೀಗ ನೋವು ನಿವಾರಕ ತೈಲ ಕೂಡ ತಯಾರಾಗಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಡುಗಡೆಯೂ ಆಗಲಿದೆ. ವಿಶೇಷವೆಂದರೆ ಈ ಅಮೃತ್ ನೋನಿ ಪೇನ್​ ಆಯಿಲ್​ಅನ್ನು ಸ್ಯಾಂಡಲ್​ವುಡ್​ ಸ್ಟಾರ್ ಕಿಚ್ಚ ಸುದೀಪ್ ಅವರು ಅನಾವರಣಗೊಳಿಸಲಿದ್ದಾರೆ.

ಇಂದು ಸಂಜೆ 7ರ ಸುಮಾರಿಗೆ ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಅಮೃತ್​ ನೋನಿ ಪೇನ್​ ಆಯಿಲ್​ ಬಿಡುಗಡೆ ಮಾಡಲಿರುವ ಕಿಚ್ಚ ಸುದೀಪ್​, ಆ ಕುರಿತು ಒಂದೆರಡು ಮಾತುಗಳನ್ನೂ ಆಡಲಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ದೈಹಿಕ ಅಂತರ ಕಾಪಾಡುವುದು ಅನಿವಾರ್ಯ ಆಗಿರುವುದರಿಂದ ಹೆಚ್ಚು ಜನರ ಮಧ್ಯೆ ಈ ಕಾರ್ಯಕ್ರಮ ಆಯೋಜಿಸುವುದು ಸಾಧ್ಯವಿಲ್ಲ. ಅದಕ್ಕೆಂದೇ ಸಂಸ್ಥೆ ಪ್ರತ್ಯೇಕ ವ್ಯವಸ್ಥೆಯನ್ನೂ ಮಾಡಿದೆ.

ಅಮೃತ್ ನೋನಿ ಸಂಸ್ಥೆಯು ಈ ಪೇನ್​ ಆಯಿಲ್ ಬಿಡುಗಡೆ ಕಾರ್ಯಕ್ರಮವನ್ನು ತನ್ನ ಅಧಿಕೃತ ಫೇಸ್​ಬುಕ್​ ಪೇಜ್​ನಲ್ಲಿ ಲೈವ್ ಆಗಿ ಪ್ರಸಾರ ಮಾಡಲಿದೆ. ಅಮೃತ್​ ನೋನಿ ಬಳಕೆದಾರರು ಹಾಗೂ ಅಮೃತ್​ ನೋನಿ ಪೇನ್​ ಆಯಿಲ್​ ಬಗ್ಗೆ ಕುತೂಹಲದಿಂದ ಕಾಯುತ್ತಿರುವವರು ಈ ಲೈವ್ ಪ್ರಸಾರವನ್ನು ವೀಕ್ಷಿಸುವ ಮೂಲಕ ವಿವರವಾಗಿ ತಿಳಿದುಕೊಳ್ಳಬಹುದಾಗಿದೆ.

ಕಿಚ್ಚ ಸುದೀಪ್ ಅವರು ಅಮೃತ್ ನೋನಿ ಪೇನ್​ ಆಯಿಲ್ ಅನಾವರಣ ಮಾಡಲಿರುವ ಕಾರ್ಯಕ್ರಮವನ್ನು ಲೈವ್ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net