

ನೆಲಮಂಗಲ: ನಟ ಕಿಚ್ಚ ಸುದೀಪ್ ಹುಟ್ಟು ಹಬ್ಬದ ಪ್ರಯುಕ್ತ ಬಡಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ 18 ಸಾವಿರ ರೂ. ಮೌಲ್ಯದ ಯುಪಿಎಸ್ ವಿತರಣೆ ಮಾಡಲಾಗಿದೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘ ಅಧ್ಯಕ್ಷ ಆರ್.ಸುನೀಲ್ ತಿಳಿಸಿದರು.
ಸದಸ್ಯ ರಂಜೀತ್ ಮಾತನಾಡಿ, ರಾಜ್ಯ ಸಂಘ ನೀಡಿರುವ ನಿರ್ದೇಶನದಂತೆ ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘ ರಾಜ್ಯದಾದ್ಯಂತ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಸಂಘದಿಂದ ಇನ್ನಷ್ಟು ಜನೋಪಕಾರಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಸಂಘದ ಸದಸ್ಯರಾದ ಭಾನೇಶ್, ಸಿ.ಕೆ.ಪುನೀತ್, ಕಿರಣ್, ನೀಲಕಂಠ, ನಾರಾಯಣ್, ಜಿ.ವೈ.ಪೂರ್ಣಚಂದ್ರ, ರಕ್ಷಿತ್, ಅಂಜನ್, ನಟರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯೋಜಕ ಎಂ.ಎ.ಮನೋಹರ್ ಇತರರಿದ್ದರು.
02 ನೆಲಪಿಎಚ್ 03 ಯುಪಿಎಸ್
ನೆಲಮಂಗಲದ ಆದರ್ಶನಗರ ಬಡಾವಣೆಯಲ್ಲಿನ ವಿದ್ಯಾರ್ಥಿ ನಿಲಯದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳು ಯುಪಿಎಸ್ ವಿತರಣೆ ಮಾಡಿದರು. ಸಂಘದ ಅಧ್ಯಕ್ಷ ಆರ್.ಸುನೀಲ್, ಉಪಾಧ್ಯಕ್ಷ ಕಿಶೋರ್ ಮತ್ತಿತರರು ಇದ್ದರು.