ಹಂಚಿನಮನಿ ಕಾಲೇಜಿನಲ್ಲಿ ಖೋಖೋ ಪಂದ್ಯಾವಳಿ

20 Dwd 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯು ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಸಹಯೋಗದಲ್ಲಿ ಶಹರ ಮಟ್ಟದ ಖೋಖೋ ಪಂದ್ಯಾವಳಿಯನ್ನು ಗುರುವಾರ ಆಯೋಜಿಸಿತ್ತು.
ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಪಿ. ಸುರೇಶ ಪಂದ್ಯಾವಳಿಗೆ ಚಾಲನೆ ನೀಡಿದರು. ಕಾಲೇಜಿನ ಅಧ್ಯಕ್ಷ ಪಿ.ಆರ್. ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟಿçÃಯ ಅಟ್ಯಾಪಟ್ಯಾ ಕ್ರೀಡಾಪಟು ಹರ್ಷಾ ನಡಮನಿ, ಜಿಲ್ಲಾ ಕ್ರೀಡಾ ಸಂಯೋಜನಾಽಕಾರಿ ಯು.ಎನ್. ಹಜಾರೆ ಅತಿಥಿಗಳಾಗಿ ಭಾಗವಹಿಸಿದ್ದರು.
ಬಾಲಕರ ವಿಭಾಗದಲ್ಲಿ ಶಿವಾಜಿ ಪಿಯು ಕಾಲೇಜು ಪ್ರಥಮ, ಶಿವಾಜಿ ವೃತ್ತದ ಕೆ.ಇ. ಬೋಡ್ ಕಾಲೇಜು ದ್ವಿತೀಯ ಸ್ಥಾನ ಪಡೆದವು. ಬಾಲಕಿಯರ ವಿಭಾಗದಲ್ಲಿ ಆರ್‌ಎಲï‌ಎಸ್ ಕಾಲೇಜು ಪ್ರಥಮ ಹಾಗೂ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಕಾಲೇಜು ದ್ವಿತೀಯ ಸ್ಥಾನ ಪಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net