

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ವಲಯ, ಸೀತಾಲಕ್ಷ್ಮೀ ಮತ್ತು ಬೀಜಾಡಿ ಬಿ. ಎಂ. ರಾಮಕೃಷ್ಣ ಹತ್ವಾರ್ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ಬೀಜಾಡಿ ಶಾಲಾ ವಠಾರದಲ್ಲಿ ಜರುಗಿದ ಕುಂದಾಪುರ ವಲಯ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಖೋಖೋ ಪಂದ್ಯಾಟದಲ್ಲಿ ಬೀಜಾಡಿ ಸರ್ಕಾರಿ ಪ್ರೌಢಶಾಲೆಯ ಬಾಲಕ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಬಾಲಕರ ವಿಭಾಗದಲ್ಲಿ ಶಂಕರನಾರಾಯಣದ ಮದರ್ ತೆರೇಸಾ ಪ್ರೌಢಶಾಲೆ ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ರಾಮ್‌ಸನ್ ಸರ್ಕಾರಿ ಪ್ರೌಢಶಾಲೆ ಕಂಡ್ಲೂರು ದ್ವಿತೀಯ ಸ್ಥಾನ ಗಳಿಸಿತು. ಬೀಜಾಡಿ ಪ್ರೌಢಶಾಲಾ ಹಿತರಕ್ಷಣ ಸಮಿತಿ ಗೌರವಾಧ್ಯಕ್ಷ ಶೇಷಗಿರಿ, ಕುಂದಾಪುರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ, ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ, ಪ್ರಮುಖರಾದ ಶೇಖರ ಚಾತ್ರಬೆಟ್ಟು, ಎಲ್.ವಿ. ನಾಯ್ಕ, ಮಂಜುನಾಥ ಕುಂದರ್, ಹಾಜಿ ಸಾಹೇಬ್, ಶ್ರೀನಿವಾಸ ಕುಂದರ್, ಹಾಲಾಡಿ ಇಬ್ರಾಹಿಂ, ಲಕ್ಷ್ಮಣ ಟಿ. ನಾಯ್ಕ, ಕಾರ್ತಿಕ್ ಕುಂದರ್ ಶುಭಹಾರೈಸಿದರು. ಮುಖ್ಯ ಶಿಕ್ಷಕಿ ವಿನೋದ ಸ್ವಾಗತಿಸಿದರು. ಉದಯ ಮೊಗವೀರ ವಿಜೇತರ ಪಟ್ಟಿ ವಾಚಿಸಿದಿದರು. ಡಾ.ಸದಾನಂದ ನಿರೂಪಿಸಿದರು.