

ಹೆಬ್ರಿ: ಖೋ-ಖೋ ಒಂದು ಉತ್ತಮ ಗ್ರಾಮೀಣ ಕ್ರೀಡೆಯಾಗಿದ್ದು, ಮನಸ್ಸು ಮತ್ತು ದೇಹ ಎರಡನ್ನು ಸದಾ ಚುರುಕಾಗಿಸಿ ಅಧ್ಯಯನ ನಡೆಸಲು ಸಹಕಾರಿಯಾಗುವ ಆಟ ಎಂದು ಡಾ.ಎನ್.ಎಸ್.ಶೆಟ್ಟಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಹಿರಿಯಡಕ (ಕರ್ನಾಟಕ ಪಬ್ಲಿಕ್ ಸ್ಕೂಲ್)ದಲ್ಲಿ ಆಶ್ರಯದಲ್ಲಿ ನಡೆದ ಉಡುಪಿ ತಾಲೂಕುಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಖೋ-ಖೋ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷ ಬಿ.ಎಲ್.ವಿಶ್ವಾಸ, ಉದ್ಯಮಿ ಸುಂದರ ಕಾಂಚನ್, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಶ್ರೀನಿವಾಸ ರಾವ್, ನಿವೃತ್ತ ಉಪನ್ಯಾಸಕ ಮುರಳೀಧರ ಹಾಲಂಬಿ, ಉಪಪ್ರಾಂಶುಪಾಲ ವಿಜಯ ಕುಮಾರ್, ಹಿರಿಯ ಉಪನ್ಯಾಸಕಿ ವೀಣಾ ಡಿ.ನಾಯಕ, ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾ, ಕ್ರೀಡಾ ಸಂಚಾಲಕ ಡಾ.ಅನಂತರಾಮ ನಾಯಕ್, ವಿದ್ಯಾರ್ಥಿ ಸಂಘದ ನಾಯಕ ಪ್ರಶಾಂತ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ಎಸ್.ವಿ.ಭಟ್ ನಿರ್ವಹಿಸಿ, ಶ್ರೀದೇವದಾಸ್ ಪ್ರಭು ಸ್ವಾಗತಿಸಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕ ಬಾಲಕ, ಬಾಲಕಿಯರ ಎರಡೂ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿತು. ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಶ್ರೀನಿವಾಸ ರಾವ್, ಪ್ರಾಂಶುಪಾಲ ಮಂಜುನಾಥ ಭಟ್, ಎಸ್‌ಡಿಎಂಸಿ ಸದಸ್ಯ ಸುಬ್ರಮ್ಮಣ್ಯ ರಾವ್, ಶೇಖರ್ ದೇವಾಡಿಗ, ನಿಶೀತಾ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರಾದ ಅಬ್ದುಲ ಜಲೀಲ್, ವಿದ್ಯಾ, ಉಪನ್ಯಾಸಕರಾದ ವೀಣಾ ಡಿ.ನಾಯಕ, ಜಯಶ್ರೀ ಅನಂತರಾಮ ನಾಯಕ್, ದೇವದಾಸ್ ಪ್ರಭು, ಶಿಕ್ಷಕ ಮೋಹನ್ ಕಡಬ ಉಪಸ್ಥಿತರಿದ್ದರು.