ಖೋ-ಖೋ ಹನಗೋಡು ಪಿಯು ಕಾಲೇಜು ಪ್ರಥಮ

3
ಹುಣಸೂರು ತಾಲೂಕು ಮಟ್ಟದ ಪಿಯು ಕಾಲೇಜುಗಳ ಖೋ-ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಹನಗೋಡು ತಂಡದ ಆಟಗಾರರೊಂದಿಗೆ ಟ್ರೋಫಿ ಸ್ವೀಕರಿಸಿದ ಕಾಲೇಜಿನ ಪ್ರಾಂಶುಪಾಲ ರಾಜೇಶ್ ಹಾಗೂ ತರಬೇತುದಾರ ಪ್ರಸನ್ನ ಉಪನ್ಯಾಸಕರು ಇದ್ದರು.
Published on

ಹನಗೋಡು: ಹುಣಸೂರು ನಗರದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಬಾಲಕರ ಖೋ-ಖೋ ಪಂದ್ಯಾವಳಿಯಲ್ಲಿ ಹನಗೋಡು ಸರ್ಕಾರಿ ಪಿಯು ಕಾಲೇಜು ಪ್ರಥಮ ಸ್ಥಾನ ಪಡೆದಿದೆ.

ಹುಣಸೂರಿನ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಖೋ-ಖೋ ಅಂತಿಮ ಪಂದ್ಯಾಟದಲ್ಲಿ

ಹುಣಸೂರಿನ ಬಿಜಿಎಸ್ ಕಾಲೇಜು ತಂಡವನ್ನು 8-4 ಅಂತರದಲ್ಲಿ ಸೋಲಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಅಲ್ಲದೆ ಕಾಲೇಜಿನ ಅರುಣ್ ಕುಮಾರ್ 1,500 ಮೀ. ಓಟದಲ್ಲಿ ದ್ವಿತೀಯ ಹಾಗೂ 3,000 ಮೀ.ಓಟದಲ್ಲಿ ತೃತೀಯ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲ ರಾಜೇಶ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net