ಖಿಳೇಗಾಂವ ಬಸವೇಶ್ವರಗೆ ವಿಶೇಷ ಪೂಜೆ

web2
ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸೋಮವಾರದ ನಿಮಿತ್ತ ಚಿದಾನಂದ ಸವದಿ ವಿಶೇಷ ಪೂಜೆ ನೆರವೇರಿಸಿದರು. ವಿನೋದ ಸವದಿ, ಸತೀಶ ಹೊನ್ನಾಗೋಳ, ಪ್ರಶಾಂತ ಅಕ್ಕೋಳ, ವಿಶಾಲ ನಿಂಬಾಳ, ಪ್ರವೀಣ ಹೊನ್ನಾಗೋಳ ಇತರರಿದ್ದರು.
Published on

ಸಂಬರಗಿ: ಸಮೀಪದ ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ಕೊನೆಯ ಶ್ರಾವಣ ಸೋಮವಾರದಂದು ವಿಶೇಷ ಬೇಳೆ ಪೂಜೆ, ಹೂವಿನ ಅಲಂಕಾರ ಪೂಜೆ ನೆರವೇರಿತು.

ಸತತ ಒಂದು ತಿಂಗಳ ಕಾಲ ಶ್ರಾವಣ ಮಾಸದಲ್ಲಿ ದಿನನಿತ್ಯ ಕರ್ನಾಟಕ, ಮಹಾರಾಷ್ಟ್ರದ ಅಪಾರ ಭಕ್ತರು ದೇವರ ದರ್ಶನ ಪಡೆದರು. ಎತ್ತಿನ ಗಾಡಿಗಳ ಮೂಲಕ ಹಾಗೂ ಕಾಲ್ನಡಿಗೆ ಮೂಲಕ ಭಕ್ತರು ಆಗಮಿಸಿದ್ದರು. ಭಕ್ತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿತ್ತು. ದಿನನಿತ್ಯ ತ್ರಿಕಾಲ ಪೂಜೆ, ಸಂಗಮನಾಥ ಮಂದಿರದಿಂದ ಅಗ್ರಾಣಿ ನದಿಯಲ್ಲಿ ಮಡಿಸ್ನಾನ ಮಾಡಿ ನೀರು ತಂದು ದೇವರ ಪೂಜೆ ನೆರವೇರಿಸಲಾಯಿತು.

ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಜನ ಭಕ್ತರು ಪಾಲ್ಗೊಂಡಿದ್ದರು. ಸಾಂಗಲಿ, ಮಿರಜ, ಕವಟೆಮಹಾಂಕಾಳ, ಅಥಣಿ ಘಟಕದಿಂದ ವಿಶೇಷ ಬಸ್ ಕಾರ್ಯಾಚರಣೆ ಮಾಡಿದ್ದರಿಂದ ಭಕ್ತರಿಗೆ ಅನುಕೂಲವಾಯಿತು.
ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ, ವಕೀಲ ವಿನೋದ ಸವದಿ, ಪ್ರಶಾಂತ ಅಕ್ಕೋಳ, ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಸತೀಶ ಹೊನ್ನಾಗೊಳ, ವಿಶಾಲ ನಿಂಬಾಳ, ರಮೇಶ ಪಾಟೀಲ, ಧರೆಪ್ಪ ಹೊನ್ನಾಗೋಳ, ಹೊನ್ನಪ್ಪ ಬಗಲಿ, ಬಸಪ್ಪ ಅಳ್ಳಟ್ಟಿ, ಸದಾಶಿವ ದಿವಾನಗೋಳ, ರಾಚಗೊಂಡ ಅಳ್ಳಿಕಟ್ಟಿ ಸೋಮವಾರದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಕುಟುಂಬ ಸಮೇತ ಆಗಮಿಸಿ ಪೂಜೆ ನೆರವೇರಿಸಿದರು. ಅನಂತಪುರ-ಖಿಳೇಗಾಂವ ರಸ್ತೆಯಲ್ಲಿರುವ ಸರಸ್ವತಿ ಮಡ್ಡಿ ತೋಟದ ವಸ್ತಿಯ ಬ್ಯಾಳಿ ಬಸವಣ್ಣ 16ನೇ ಜಾತ್ರೆ ನಿಮಿತ್ತ ಖಿಳೇಗಾಂವ ಬಸವೇಶ್ವರ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಬೆಳಗ್ಗೆ 7ರಿಂದ ರಾತ್ರಿ 8 ಗಂಟೆಯವರೆಗೆ ವಿಶೇಷ ಹಾಲುಗ್ಗಿ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net