ಜುಲೈ 25ರಂದು ಕೊಂಕಣ ರೈಲು ಮಾರ್ಗದಲ್ಲಿ ಮೆಗಾ ಬ್ಲಾಕ್

khed rly station
Published on


ಮಂಗಳೂರು: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡ್ ಮತ್ತು ಅರಾವಳಿ ರೈಲು ನಿಲ್ದಾಣಗಳ ನಡುವೆ ಇಲಾಖೆಯ ಸೊತ್ತು ನಿರ್ವಹಣೆ ಕಾಮಗಾರಿ ಹಿನ್ನೆಲೆ ಜುಲೈ 25 ರಂದು ಈ ಮಾರ್ಗದಲ್ಲಿ ಮೂರು ಗಂಟೆಗಳ ಅವಧಿಯ ಮೆಗಾ ಬ್ಲಾಕ್ ಏರ್ಪಡಲಿದೆ ಎಂದು ಕೊಂಕಣ ರೈಲ್ವೆ ಘೋಷಿಸಿದೆ.
ಪರಿಣಾಮ ಪ್ರಸ್ತಾವಿತ ಮಾರ್ಗದಲ್ಲಿ ಈ ಅವಧಿಯಲ್ಲಿ ಸಂಚರಿಸುವ ರೈಲುಗಳು ನಿಗದಿತ ವೇಳಾಪಟ್ಟಿಗಿಂತ ತಡವಾಗಿ ಸಂಚರಿಸಲಿವೆ. ಜುಲೈ 24 ರಂದು ಹೊರಡುವ ಕೊಯಮತ್ತೂರು ಜಂಕ್ಷನ್- ಜಬಲ್‌ಪುರ ಜಂಕ್ಷನ್ ಸ್ಪೆಷಲ್ ರೈಲು (02197) ಮಡಗಾಂವ್ ಜಂಕ್ಷನ್ ಮತ್ತು ಸಂಗಮೇಶ್ವರ ರೋಡ್ ನಡುವೆ ಸುಮಾರು 2.30 ಗಂಟೆ ತಡೆಹಿಡಿಯಲ್ಪಡಲಿದೆ.
ಜುಲೈ 25ರಂದು ಹೊರಡುವ ಸಾವಂತವಾಡಿ ರೋಡ್- ದಿವಾ ಎಕ್ಸ್‌ಪ್ರೆಸ್ (10106) ಪ್ರಯಾಣ ಸಾವಂತವಾಡಿ ರೋಡ್ ಮತ್ತು ಸಂಗಮೇಶ್ವರ ರಸ್ತೆ ನಡುವೆ ಸುಮಾರು ಎರಡು ಗಂಟೆ ತಡೆಹಿಡಿಯಲ್ಪಡಲಿದೆ.
ಜುಲೈ 25ರಂದು ಪ್ರಯಾಣ ಆರಂಭಿಸುವ ಮಡಗಾಂವ್ ಜಂಕ್ಷನ್- ಮುಂಬೈ ಸಿಎಸ್‌ಎಂಟಿ ಮಾಂಡೋವಿ ಎಕ್ಸ್‌ಪ್ರೆಸ್ (10104 ) ರೈಲು ರತ್ನಗಿರಿ ಮತ್ತು ಸಂಗಮೇಶ್ವರ ರಸ್ತೆ ವಿಭಾಗದ ನಡುವೆ ಸುಮಾರು ಒಂದು ಗಂಟೆ ಕಾಲ ತಡೆಹಿಡಿಯಲ್ಪಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net