ಕೊಳಚೆಮಯವಾದ ಕೆಎಚ್ ಬಿ ಕಾಲನಿ ರಸ್ತೆ,  ಅಮರಗೋಳ ಜಡ್ಜ್ ಕ್ವಾರ್ಟರ್ಸ ಬಳಿ ಅವಾಂತರ

IMG-20241103-WA0032_1.jpg
Published on

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಜಡ್ಜ್ ಕ್ವಾರ್ಟರ್ಸ ಬಳಿಯ ಕೆಎಚ್ ಬಿ ಕಾಲನಿ ಎಂಐಜಿ ಮಾರ್ಗದಲ್ಲಿ ಒಳಚರಂಡಿ ಬ್ಲಾಕ್ ಆಗಿ ಕೊಳಚೆಯು ರಸ್ತೆಯಲ್ಲಿ ಹರಿಯುತ್ತಿದೆ.

ಸುಮಾರು ಒಂದು ತಿಂಗಳಿಂದ ಇಲ್ಲಿಯ ಮೂರು ಚರಂಡಿಗಳು ಓಪನ್ ಆಗಿದ್ದು, ಕೊಳಚೆಯೆಲ್ಲ ರಸ್ತೆಯಲ್ಲಿ ನಿಂತುಕೊಂಡಿದೆ.

ಇತ್ತೀಚೆಗೆ ಸುರಿದ ಮಳೆ ಸಂದರ್ಭದಲ್ಲಿ ಚರಂಡಿಗಳು ಬ್ಲಾಕ್ ಆಗಿದ್ದು, ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಇದರಿಂದಾಗಿ ರಸ್ತೆ ಮೇಲೆ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ.

ಕರ್ನಾಟಕ ಗೃಹ ಮಂಡಳಿಯ ನಿರ್ವಹಣೆಯಲ್ಲಿರುವ ಕಾಲನಿಯ ಸಮಸ್ಯೆಗಳ ಬಗ್ಗೆ ಹಲವು ಬಾರಿ ಕೆಎಚ್ ಬಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.

ರಸ್ತೆ ಮೇಲಿನ ದೊಡ್ಡ ತಗ್ಗುಗಳಲ್ಲಿ ಕೊಳಚೆ ಸಂಗ್ರಹವಾಗಿ ಸುತ್ತಲಿನ ವಾತಾವರಣ ಗಬ್ಬೆದ್ದು ಹೋಗಿದೆ. ಮೂಗು ಮುಚ್ಚಿಕೊಂಡು ಓಡಾಡುವ ಪ್ರಸಂಗ ಬಂದಿದೆ. ಮಕ್ಕಳು ಚರಂಡಿಯಲ್ಲಿ ಬಿದ್ದರೆ ಅನಾಹುತ ಸಂಭವಿಸುವ ಅಪಾಯವೂ ಇದೆ. ಹಾಗಾಗಿ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net