ತಾಳಿಕೋಟೆ ಖಾಸ್ಗತೇಶ್ವರ ಮಹಾ ಮಠದ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರಾ ಉತ್ಸವ ಅಂಗವಾಗಿ ಶುಕ್ರವಾರ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ಶ್ರೀಮಠದಿಂದ ಪ್ರಾರಂಭಗೊಂಡು ಬಸವೇಶ್ವರ ದೇವಸ್ಥಾನದವರೆಗೆ ಜರುಗಿ ಮರಳಿ ಶ್ರೀಮಠಕ್ಕೆ ತಲುಪಿತು.
ಸಿದ್ದಲಿಂಗ ದೇವರ ಅಧ್ಯತೆ ವಹಿಸಿದ್ದರು. ಉಸ್ತುವಾರಿ ವೇ.ಮುರುಶ ವಿರಕ್ತಮಠ, ವೇ.ವಿಶ್ವನಾಥ ವಿರಕ್ತಮಠ, ವೇ.ಮಹಾಂತಯ್ಯ ವಿರಕ್ತಮಠ ನೇತೃತ್ವ ವಹಿಸಿದ್ದರು.
ತಾಳಿಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸೇರಿ ಮುಂಬೈ, ಪುಣೆ, ಸಾಂಗ್ಲಿ, ಮಿರಜ್, ಸೊಲ್ಲಾಪುರ, ಕೊಲ್ಲಾಪುರ, ಬೆಂಗಳೂರು, ಗೋವಾ ಹಾಗೂ ಹೈದ್ರಾಬಾದ್ನಿಂದ ಲಾಂತರ ಭಕ್ತರು ಆಗಮಿಸಿದ್ದರು.
ಜಾತ್ರೋತ್ಸವ ಅಂಗವಾಗಿ ದಿನನಿತ್ಯ ಖಾಸ್ಗತೇಶ್ವರ ಗದ್ದುಗೆಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಹಾಗೂ ಮಹಾ ಮಂಗಳಾರತಿ ನಡೆಯಿತು.