

ಕಲಬುರಗಿ: ಜಗತ್ತಿನಲ್ಲಿ ಯಾವ ದೇಶಗಳ ಮಧ್ಯೆಯೂ ಯುದ್ದ ಒಳ್ಳೆಯದಲ್ಲ. ಯಾರು ಯಾರ ಮೇಲೂ ಯುದ್ದ ಮಾಡಬಾರದು. ಎಂಥದ್ದೆ ಸಮಸ್ಯೆ ಇರಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ.ಮಲ್ಲಿಕರ‍್ಜುನ ರ‍್ಖಗೆ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯುದ್ದ ಮಾಡಿ ಎಲ್ಲ ನಾಶ ಆದರೆ ಹೇಗೆ ಬದುಕುತ್ತೀರಿ.? ಅಮೇರಿಕಾ ಇರಾನ್ ಮೇಲೆ ದಾಳಿ ಮಾಡಿದ್ದು ತಪ್ಪು. ಹಿಂದಿನಿಂದಲೂ ನಮ್ಮ ಜತೆ ಇರಾನ್ ಒಳ್ಳೆಯ ಸಂಬಂಧ ಹೊಂದಿದೆ. ತೈಲ ಆಮದು ಸೇರಿ ಅನೇಕ ವಿಚಾರಗಳಲ್ಲಿ ಇರಾನ್ ಒಳ್ಳೆಯ ಸಂಬಂಧ ಭಾರತದೊಂದಿಗೆ ಹೊಂದಿದೆ. ಆದರಿಂದ ಇಡೀ ವಿಶ್ವಕ್ಕೆ ಬುದ್ದನ ಶಾಂತಿ ಬೇಕು. ಹೊರತು ಯುದ್ದ ಬೇಕಾಗಿಲ್ಲ ಎಂದು ತಿಳಿಸಿದರು.
ಇತ್ತೀಚಿಗೆ ನಡೆದ ಭಾರತ- ಪಾಕಿಸ್ತಾನ ಯುದ್ದ ವೇಳೆ ಎಲ್ಲರೂ ಒಂದಾಗಿ ಎಂದು ಹೇಳಿದಾಗ, ಕಾಶ್ಮೀರದಿಂದ- ಕನ್ಯಾಕುಮಾರಿಯವರೆಗೂ ಒಂದಾಗಿದ್ದೇವು. ಆದರೆ, ಮೋದಿಯವರೇ ರ‍್ವಪಕ್ಷ ಸಭೆಗೆ ಬರಲಿಲ್ಲ. ಎಲ್ಲರೂ ಒಂದಾಗಿ ಎನ್ನುವ ಸಂದೇಶ ಕೊಟ್ಟಿದ್ದು ಒಳ್ಳೆಯದೇ. ಆದರೆ, ಅವರೇ ಕರೆದ ಸಭೆಗೆ ತಾವೇ ಬರೋದಿಲ್ಲ ಎಂದರೆ, ಇದರಲ್ಲಿ ಮೋದಿಯವರ ಅಹಂಕಾರ ತೋರಿಸುತ್ತೆ ಎಂದು ರ‍್ಖಗೆ ಪ್ರಧಾನಿ ಮೋದಿ ವಿರುದ್ದ ಸಮಾಧಾನ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಚುನಾವಣೆ ಪಾರರ‍್ಶಕವಾಗಿ ನಡೆದಿಲ್ಲ ಎಂದು ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದೇವೆ. ಅದನ್ನೆ ರಾಹುಲ್ ಗಾಂಧಿ ಅವರು ಪ್ರಶ್ನೆ ಮಾಡ್ತಿದ್ದಾರೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಅಸಮಾಧಾನ ವಿಚಾರದ ಪ್ರತಿಕ್ರಿಯೆ ನಿಡಲು ನಿರಾಕರಿಸಿ, ರಾಜ್ಯದ ಬಗ್ಗೆ ರಾಜ್ಯ ನಾಯಕರನ್ನೆ ಕೇಳಿ ಎಂದು ಮಲ್ಲಿಕರ‍್ಜುನ ರ‍್ಖಗೆ ಹೇಳಿದರು.