ಸರ್ಕಾರಿ ಶಾಲೆ ಗೋಡೆ ಕುಸಿತ ; ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು

IMG-20230728-WA0042.jpg
Published on

ಬೆಳಗಾವಿ : ಹಲವು ದಿನಗಳಿಂದ ಅಬ್ಬರಿಸಿಸುತ್ತಿದ್ದ ವರುಣಾರ್ಭಟ ಶುಕ್ರವಾರ ಬೆಳಗಾವಿ ನಗರ ಸೇರಿದಂತೆ ಜಿಲ್ಲಾದ್ಯಂತ ತಗ್ಗಿದ್ದು, ನಿರಂತರ ಮಳೆಗೆ ನೆಂದಿದ್ದ ಮನೆ ಹಾಗೂ ಸರ್ಕಾರಿ ಕಟ್ಟಡಗಳ ಗೋಡೆ ಕುಸಿಯುತ್ತಿವೆ.

ಖಾನಾಪುರ ತಾಲೂಕಿನ ಬ್ಯಾಡರಹಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆ ಪ್ರಾರ್ಥನೆಯಲ್ಲಿ ವೇಳೆ ಶಾಲಾ ಕೊಠಡಿಯ ಮೇಲ್ಛಾವಣಿ ಮತ್ತು ಗೋಡೆ ಕುಸಿದಿದ್ದು, ಇದೇ ಕೊಠಡಿಯಲ್ಲಿ ಪ್ರತಿದಿನ 20 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅದೃಷ್ಟವಷಾತ್ ವಿದ್ಯಾರ್ಥಿಗಳು ಮೈದಾನದಲ್ಲಿ ಪ್ರಾರ್ಥನೆ ಸಿಲ್ಲಿಸುತ್ತಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  

ಶಾಲೆಯ ಕಟ್ಟಡ ಶಿಥಿಲಗೊಂಡಿದ್ದರಿಂದ ಗ್ರಾಮಸ್ಥರ ತಿಂಗಳ ಹಿಂದೆಯೇ ಡಿಡಿಪಿಐ ಬಸವರಾಜ ನಾಲತವಾಡ ಅವರಿಗೆ ಮನವಿ ಸಲ್ಲಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಭಯಪಡುತ್ತಿದ್ದರು. ಆದರೂ, ಗ್ರಾಮಸ್ಥರ ಮನವಿಯನ್ನು ನಿರ್ಲಕ್ಷಿಸಿ ಬೇಜವಾಬ್ದಾರಿ ಪ್ರದರ್ಶಿಸಿದ್ದ ಡಿಡಿಪಿಐ ನಾಲತವಾಡ ವಿರುದ್ಧ ಆಕ್ರೋಶ ಹೊರಹಾಕಿದ್ದು, ಪ್ರಾಣಾಪಾಯ ಸಂಭವಿಸದಿದ್ದರೂ, ಶಾಲೆ ಕುಸಿದು ಹಾನಿಯಾಗಿರುವುದಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಮಳೆಯ ಅಬ್ಬರ ತಗ್ಗಿದ್ದರೂ ನದಿಗಳ ಪ್ರವಾಹ ಮುಂದುವರಿದಿದ್ದು, ಕೃಷ್ಣಾ ಹಾಗೂ ಮಾರ್ಕಂಡೇಯ ನದಿ ತಟದ ಗ್ರಾಮಗಳಲ್ಲಿನ ಹಲವು ಸೇತುವೆಗಳು ಇನ್ನೂ ಜಲಾವೃತವಾಗಿಯೇ ಇವೆ. ಜಿಲ್ಲಾದ್ಯಂತ ಒಟ್ಟು 30 ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿರುವ ಮಾರ್ಗಗಳಲ್ಲಿ ಹಾಗೂ ಗೋಕಾಕ್ ಫಾಲ್ಸ್ ಸೇರಿದಂತೆ ಹಲವು ಪ್ರವಾಸಿತಾಣಗಳಲ್ಲಿ ಜನ ಸಂಚಾರ ನಿರ್ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net