

ಖಾನಾಪುರ: ಅಧಿಕ ಸಾಮರ್ಥ್ಯದ ದೀಪಗಳಿಂದ ಪಟ್ಟಣ ಕಂಗೊಳಿಸಲಿದೆ. ಖಾನಾಪುರದ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಯಡಿ ಅನುದಾನ ಮಂಜೂರಾಗಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಹೈಮಾಸ್ಟ್ ವಿದ್ಯುತ್ ದೀಪಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಾರುತಿ ನಗರದಲ್ಲಿನ ಎಲ್ಲ ರಸ್ತೆಗಳಿಗೂ ಕಾಂಕ್ರೀಟ್ ಹಾಕಲಾಗಿದೆ. ಬಾಕಿ ಉಳಿದ ರಸ್ತೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಬೈಲೂಕರ, ಉಪಾಧ್ಯಕ್ಷೆ ಜಯಾ ಭೂತಕಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಪ್ಪಯ್ಯ ಕೊಡೋಳಿ, ಮುಖ್ಯಾಧಿಕಾರಿ ಸಂತೋಷ ಕುರಬೇಟ, ಸದಸ್ಯರಾದ ಮಝರ್ ಖಾನಾಪುರಿ, ಲಕ್ಷ್ಮಣ ಮಾದಾರ, ವಿನೋದ ಪಾಟೀಲ, ರಫೀಕ್ ವಾರಿಮಣಿ, ಪ್ರಕಾಶ ಬೈಲೂರಕರ, ನಾರಾಯಣ ಒಗಲೆ, ತೊಹೀದ್ ಚಾಂದಕನ್ನವರ, ಮೇಘಾ ಕುಂದರ್ಗಿ,
ಲತಾ ಪಾಟೀಲ, ಲಕ್ಷ್ಮೀ ಅಂಕಲಗಿ, ಗುಂಡು ತೋಪಿನಕಟ್ಟಿ, ಅಮೃತ ಪಾಟೀಲ, ರವಿ ಕಾಡಗಿ, ಅಭಿಯಂತರಾದ ತಿರುಪತಿ ರಾಠೋಡ, ಗಂಗಾಧರ ಕಾಂಬಳೆ, ಪ್ರೇಮಾನಂದ ನಾಯ್ಕ, ರಾಜು ಜಾಂಬೋಟಿ, ಮೊಹಸಿನ್ ಬಡೇಘರ್ ಇತರರಿದ್ದರು.