ಕಾನಹೊಸಹಳ್ಳಿ ಸಮೀಪದ ಲೋಕಿಕೆರೆ ಯುವಕನಿಗೆ ಅಂಟಿದ ಸೋಂಕು, ಬೆಂಗಳೂರಿನ ನಂಟು

Lokikere Village Sealdown
ಲೋಕಿಕೆರೆ ಗ್ರಾಮದ ಸೋಂಕಿತ ಯುವಕನ ಮನೆ ಸುತ್ತಲಿನ ಪ್ರದೇಶವನ್ನು ಮಂಗಳವಾರ ಸೀಲ್‌ಡೌನ್ ಮಾಡಲಾಯಿತು.
Published on

ಕಾನಹೊಸಹಳ್ಳಿ: ಸಮೀಪದ ಲೋಕಿಕೆರೆ ಗ್ರಾಮದ 26 ವರ್ಷದ ಯುವಕನಿಗೆ ಕರೊನಾ ಸೋಂಕು ದೃಢಪಟ್ಟಿದೆ. ಮಂಗಳವಾರ ಕುಟುಂಬದ ಮೂವರನ್ನು ಕ್ವಾರೆಂಟೈನ್‌ಗೆ ಒಳಪಡಿಸಿದ್ದು, ಮನೆ ಸುತ್ತಲಿನ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.

ಬೆಂಗಳೂರಿನ ನಂಟು: ಸಂಬಂಧಿಕರ ಮದುವೆಗೆಂದು ಚಳ್ಳಕೆರೆಗೆ ಹೋಗಿದ್ದ. ಆ ಮದುವೆಗೆ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್ ಬಂದಿದ್ದರು. ಆಕೆಗೆ ಇತ್ತೀಚೆಗೆ ಸೋಂಕು ದೃಢಪಟ್ಟ ನಂತರ ಪ್ರಥಮ ಸಂಪರ್ಕದಲ್ಲಿದ್ದ ಯುವಕನಿಗೆ ಗಂಟಲು ದ್ರವ ಪಡೆದು ಪರೀಕ್ಷಗೆ ಕಳಿಸಿದ್ದು ದೃಢಪಟ್ಟಿದೆ. ಗ್ರಾಮಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿ ಸರ್ವೇ ನಡೆಸಿದ್ದು, ಯುವಕನ ಪ್ರಥಮ ಸಂಪರ್ಕದಲ್ಲಿ 42 ಜನ ಇದ್ದರೆಂದು ತಿಳಿದು ಬಂದಿದೆ. ಅಲ್ಲದೆ ದ್ವಿತೀಯ ಸಂಪರ್ಕದಲ್ಲಿದ್ದವರ ಮಾಹಿತಿಗಾಗಿ ಸರ್ವೇ ಮುಂದುವರಿದಿದೆ. ಸ್ಥಳಕ್ಕೆ ತಹಸೀಲ್ದಾರ್ ಮಹಾಬಲೇಶ್ವರ, ತಾಪಂ ಇಒ ಜಿ.ಎಂ.ಬಸಣ್ಣ ಭೇಟಿ ನೀಡಿ ಪರಿಶೀಲಿಸಿದರು. ಸಿಡಿಪಿಒ ಎಳೆ ನಾಗಪ್ಪ, ಉಪ ತಹಸೀಲ್ದಾರ್ ಚಂದ್ರಮೋಹನ್, ಕಾನಹೊಸಹಳ್ಳಿ ಪಿಎಸೈ ಎಚ್.ನಾಗರಾಜ್, ಡಾ.ಮಾರುತಿ, ಆರೋಗ್ಯ, ಕಂದಾಯ ಇಲಾಖೆ ಸಿಬ್ಬಂದಿ ಮರುಳಸಿದ್ಧ, ಟಿ.ಎನ್.ಸ್ವಾಮಿ, ಪ್ರಕಾಶ್, ಮಲ್ಲಾಜಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net