ಸೈನಿಕ ತೆರಿಗೆ ನೀತಿ ಜಾರಿಗೆ ಆಗ್ರಹ: ಲೋಕಿಕೆರೆಯಲ್ಲಿ ಯುವ ಸಾಹಿತಿಯಿಂದ ಒಂಟಿ ಹೋರಾಟ

Lokikeri Youth Fighter Dhananjay Protest
ಲೋಕಿಕೆರೆಯಲ್ಲಿ ಯುವ ಸಾಹಿತಿ ಧನಂಜಯ ಗುರುವಾರ ಹೋರಾಟ ನಡೆಸಿದರು.
Published on

ಕಾನಹೊಸಹಳ್ಳಿ: ಸೈನಿಕರಿಗೆ ಅರ್ಥಿಕಶಕ್ತಿ ತುಂಬಲು, ಅವರ ಕುಟುಂಬಗಳ ನೆರವಿಗಾಗಿ ನಿಧಿ ಸಂಗ್ರಹವಾಗುವಂತಹ ‘ಸೈನಿಕ ತೆರಿಗೆ ನೀತಿ’ಯನ್ನು ಕೇಂದ್ರ-ರಾಜ್ಯ ಸರ್ಕಾರ ಜಾರಿಗೆ ತರುವಂತೆ ಆಗ್ರಹಿಸಿ ಲೋಕಿಕೆರೆಯಲ್ಲಿ ಯುವ ಸಾಹಿತಿ ಧನಂಜಯ ಗುರುವಾರ ಒಂಟಿ ಹೋರಾಟ ನಡೆಸಿದರು.

ಗ್ರಾಪಂನಲ್ಲಿ ಮನೆ, ನೀರು ತೆರಿಗೆ ಮಾದರಿಯಂತೆ ಸೈನಿಕ ತೆರಿಗೆ ಕಾಲಂ ಸೇರಿಸಬೇಕು. ಸಭೆ, ಸಮಾರಂಭ, ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪರವಾನಗಿ ನೀಡುವಾಗ ಜನರಿಂದ ಪಡೆಯುವ ತೆರಿಗೆಯಂತೆ ಸೈನಿಕರ ಕರವನ್ನೂ ವಸೂಲಿ ಮಾಡುವಂತಹ ಮಹತ್ವದ ನೀತಿಯನ್ನು ಜಾರಿಗೆ ತರಬೇಕೆಂಬುದು ಅವರ ಬೇಡಿಕೆಯಾಗಿತ್ತು. ಪತ್ರಿಕೆಯೊಂದಿಗೆ ಮಾತನಾಡಿದ ಧನಂಜಯ, ದೇಶ ರಕ್ಷಣೆಗಾಗಿ ಜೀವ-ಜೀವನ ತ್ಯಾಗ ಮಾಡುವ ಸೈನಿಕರಿಗೆ ಕಲ್ಯಾಣ ಮತ್ತು ಅರ್ಥಿಕ ನೆರವಿಗಾಗಿ ಈ ಹೋರಾಟ. ಮುಂದಿನ ದಿನಗಳಲ್ಲಿ ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಹೋರಾಟ ವಿಸ್ತರಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net