ಅಕ್ರಮ ಚಟುವಟಿಕೆಗಳ ವಿರುದ್ಧ ಖಾಕಿ ಸಮರ, 11 ಪ್ರಕರಣದಲ್ಲಿ 12 ಆರೋಪಿತರ ಮೇಲೆ ಕ್ರಮ, ಗಾಂಜಾ-ಮಾವಾ-ಕಳ್ಳಬಟ್ಟಿ ವಶ

ganja
Published on

ವಿಜಯಪುರ: ಅಕ್ರಮ ಚಟುವಟಿಕೆಗಳ ವಿರುದ್ಧ ನಿರಂತರ ಸಮರ ಸಾರಿರುವ ಖಾಕಿ ಪಡೆ ಗಾಂಜಾ, ಮಾವಾ ಹಾಗೂ ಕಳ್ಳಬಟ್ಟಿ ಸಾಗಾಟದಲ್ಲಿ ತೊಡಗಿಸಿಕೊಂಡಿದ್ದ ಖದೀಮರನ್ನು ಹೆಡೆಮುರಿ ಕಟ್ಟಿ ತಂದಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಆದೇಶ ಹಾಗೂ ಎಎಸ್‌ಪಿ ಶಂಕರ ಮಾರಿಹಾಳ ಮತ್ತು ರಾಮನಗೌಡ ಹಟ್ಟಿ ಮಾರ್ಗದರ್ಶನದೊಂದಿಗೆ ಅಖಾಡಕ್ಕಿಳಿದ ಡಿವೈಎಸ್‌ಪಿ ಬಸವರಾಜ ಯಲಿಗಾರ ನೇತೃತ್ವದ ಅಧಿಕಾರಿಗಳ ತಂಡ ಚುರುಕಿನ ಕಾರ್ಯಾಚರಣೆ ನಡೆಸಿ ಸಾವಿರಾರು ರೂಪಾಯಿ ಮೌಲ್ಯದ ಗಾಂಜಾ, ಮಾವಾ ಹಾಗೂ ಕಳ್ಳಬಟ್ಟಿ ವಶಕ್ಕೆ ಪಡೆದಿದೆ.

SP OFFICE vijayapur
ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ.

ಗಾಂಜಾ ಮತ್ತು ಮಾವಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು 35100 ರೂಪಾಯಿ ಮೌಲ್ಯದ 5.85 ಕೆಜಿ ಗಾಂಜಾ ಹಾಗೂ 600 ರೂಪಾಯಿ ಮೌಲ್ಯದ 50 ಗ್ರಾಂ ಮಾವಾ ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಮದ್ಯ ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದ 8 ಪ್ರಕರಣಗಳನ್ನು ಭೇದಿಸಿ 10 ಜನರನ್ನು ಬಂಧಿಸಿದ್ದು, ಇದರಲ್ಲಿ 22835 ರೂಪಾಯಿ ಮೌಲ್ಯದ 42.71 ಲೀಟರ್ ಮದ್ಯ ವಶಕ್ಕೆ ಪಡೆದಿದ್ದಾರೆ. ಇನ್ನು ಕಳ್ಳಬಟ್ಟಿ ಸಾರಾಯಿ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ 11 ಪ್ರಕರಣಗಳಲ್ಲಿ 12 ಜನರ ಮೇಲೆ ಕ್ರಮ ಜರುಗಿಸಲಾಗಿದ್ದು ಇವರಿಂದ 55 ಲೀಟರ್ ಕಳ್ಭಟ್ಟಿ ವಶಕ್ಕೆ ಪಡೆಯಲಾಗಿದೆ. ಪೊಲೀಸ್ ತಂಡದ ಕಾರ್ಯವನ್ನು ಎಸ್‌ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net