ದೇವನಹಳ್ಳಿಯಲ್ಲಿ 56 ಶಾಲಾ ವಾಹನ ಚಾಲಕರಿಗೆ ಖಾಕಿ ಶಾಕ್​

17 06 2025_BGR RURAL_PAGE_04
ದೇವನಹಳ್ಳಿ ಸಂಚಾರ ಪೋಲಿಸರು ಶಾಲಾ ವಾಹನಗಳ ಚಾಲಕರ ಡ್ರಿಂಕ್​ ಆ್ಯಂಡ್​ ಡ್ರೆವ್​ ಬಗ್ಗೆ ತಪಾಸಣೆ ನಡೆಸಿದರು.
Published on

ದೇವನಹಳ್ಳಿ: ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಶಾಲೆಗಳ ವ್ಯಾನ್​, ಬಸ್​ ಮತ್ತು ಕಾರುಗಳನ್ನು ಬೆಳ್ಳಂಬೆಳ್ಳಗೆ ದೇವನಹಳ್ಳಿ ಸಂಚಾರಿ ಪೊಲೀಸರು ಠಾಣಾ ವ್ಯಾಪ್ತಿಯ ಎಲ್ಲ ವೃತ್ತಗಳಲ್ಲಿ ತಡೆದು ಏಕಕಾಲಕ್ಕೆ ತಪಾಸಣೆ ನಡೆಸಿದರು.

ಮಕ್ಕಳನ್ನು ಶಾಲಾ ಸಮಯಕ್ಕೆ ಸರಿಯಾಗಿ ಅವರವರ ಮನೆಗಳ ಬಳಿಯಿಂದ ಪಿಕಪ್​ ಮಾಡಿ ಎಂದಿನಂತೆ ಬೆಳ್ಳಂಬೆಳಿಗ್ಗೆ ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಶಾಲೆಗಳ ವ್ಯಾನ್​, ಬಸ್​, ಕಾರುಗಳನ್ನು ದೇವನಹಳ್ಳಿ ಸಂಚಾರ ಪೋಲಿಸ್​ ಠಾಣೆ ವ್ಯಾಪ್ತಿಯ ಎಲ್ಲ ವೃತ್ತಗಳಲ್ಲಿ ತಡೆದ ಟ್ರಾಫಿಕ್​ ಪೊಲಿಸರು ಏಕಕಾಲದಲ್ಲಿ ತಪಾಸಣೆ ನಡೆಸಿದರು. ಈ ಬಗ್ಗೆ ಮಾತನಾಡಿದ ಪಿಎಸ್​ಐ ಸಾವಿತ್ರಿ ಅವರು, ಇನ್​ಸ್ಪೆಕ್ಟರ್​ ರಾವೇಂದ್ರ ಅವರ ಮಾರ್ಗದರ್ಶನದಲ್ಲಿ ಪೋಲಿಸರು ರಾಣಿ ವೃತ್ತ, ಶಿವಕುಮಾರಸ್ವಾಮೀಜಿ ವೃತ್ತ, ಕನಕದಾಸ ವೃತ್ತ, ಕೆಂಪೇಗೌಡ ವೃತ್ತ, ಗಿರಿಯಮ್ಮ ಸರ್ಕಲ್​ ಹಾಗೂ ಹೊಸ ಬಸ್​ ನಿಲ್ದಾಣ ಸೇರಿ ಹಲವು ಮಾರ್ಗವಾಗಿ ಓಡಾಡುವ 56 ಶಾಲಾವಾಹನಗಳನ್ನು ತಡೆದು ತಪಾಸಣೆ ನಡೆಸಿದರು. ವಾಹನದಲ್ಲಿ ನಿಗದಿತ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆ ಇದೆಯೇ, ವಾಹನ ದಾಖಲೆಗಳು, ನೋಂದಣಿ, ವಿಮೆ ಸೇರಿ ವಾಹದ ಸುಸ್ಥಿತಿ, ಅತೀ ಮುಖ್ಯವಾಗಿ ಚಾಲಕರ ಪರವಾನಗೆ ಮತ್ತು ಅವರು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಪರಿಶೀಲಿಸಿದರು.

ಕಡ್ಡಾಯವಾಗಿ ನಿಯಮ ಪಾಲನೆ ಮಾಡಬೇಕು. ವೇಗವಾಗಿ ವಾಹನ ಚಲಾಯಿಸಬಾರದು ಎಂದು ಹೇಳಿ ಕಳುಹಿಸಲಾಗಿದೆ. ತಪಾಸಣೆ ನಡೆಸಿದ 56 ವಾಹನ ಚಾಲಕರು ಮದ್ಯಪಾನ ಮಾಡಿರಲಿಲ್ಲ ಮತ್ತು ವಾಹನಗಳ ದಾಖಲೆಗಳು ಸರಿಯಾಗಿದ್ದವು. ಇನ್​ಸ್ಪೆಕ್ಟರ್​ ರಾವೇಂದ್ರ, ಪಿಎಸ್​ಐಗಳಾದ ಕೆ.ಸಿ.ಸಾವಿತ್ರಿ, ವಿಶ್ವನಾಥ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net