ಪೈಶಾಚಿಕ ಕೃತ್ಯದ ಸ್ಥಳದಲ್ಲಿ ಖಾಕಿ ತಲಾಶ್​

Published on

ಮಹಜರು ನಡೆಸಿ ಮಹತ್ತರ ಸಾಕ್ಷ$್ಯ ಕಲೆ ಹಾಕಿದ ಚಿಕ್ಕಬಳ್ಳಾಪುರ ಪೊಲೀಸರು

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ

ತಾಲೂಕಿನ ವೀರದಿಮ್ಮಮ್ಮನ ಕಣಿವೆಯಲ್ಲಿ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಪೊಲೀಸರು ಮಂಗಳವಾರ ಸ್ಥಳ ಮಹಜರು ನಡೆಸಿ, ಮಹತ್ತರ ಸಾಕ್ಷ$್ಯ ಕಲೆ ಹಾಕಿದರು.

ಆರ್ಥಿಕ ಸಂಕಷ್ಟ, ನಿರುದ್ಯೋಗ ಸಮಸ್ಯೆಯಿಂದ

ಜರ್ಜರಿತಗೊಂಡಿದ್ದ ಯುವತಿಗೆ ನೆರವು ನೀಡುವ ನೆಪದಲ್ಲಿ ನಗರದ ನಿವಾಸಿಗಳಾದ ಟ್ರಾ$್ಯಕ್ಟರ್​ ಮೆಕಾನಿಕ್​ ಸಿಕಂದರ್​ (34), ಜನಾರ್ದನಾಚಾರಿ (33) ದುಷತ್ಯವೆಸಗಿದ್ದಾರೆ. ಅಮಾಯಕಿಯ ದುರುಪಯೋಗ: ಸಂತ್ರಸ್ತೆಯು ಚಿಕ್ಕಬಳ್ಳಾಪುರ ನಗರದ ತಿಪ್ಪೇನಹಳ್ಳಿ ಸಮೀಪದ ಪೆಟ್ರೋಲ್​ ಬಂಕ್​ ಬಳಿ ಕುಳಿತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಸಿಕಂದರ್​ ಬಟ್ಟೆ, ಊಟ ಕೊಡಿಸಿ, ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದ. ಇದನ್ನು ನಂಬಿ ಹೋದಾಗ ವೀರದಿಮ್ಮಮ್ಮನ ಕಣಿವೆಯ ಅರಣ್ಯ ಪ್ರದೇಶದಲ್ಲಿನ ಬಡಾವಣೆಯಲ್ಲಿ ಅತ್ಯಾಚಾರವೆಸಗಿದ್ದಾನೆ.

ಹಾಗೆಯೇ ಸ್ನೇಹಿತ ಜನಾರ್ದನಾಚಾರಿಯನ್ನು ಕರೆಸಿಕೊಂಡು ಯುವತಿಗೆ ಆಸೆ ಆಮಿಷಗಳನ್ನೊಡ್ಡಲಾಗಿದೆ. ಕೊನೆಗೆ ಬಟ್ಟೆ ಹರಿದ ಸ್ಥಿತಿಯಲ್ಲಿ ಪುನ@ ಪೆಟ್ರೋಲ್​ ಬಂಕ್​ ಬಳಿ ಬಿಟ್ಟು ಹೋಗಿದ್ದು, ಸ್ಥಳಿಯರು ಮಾಹಿತಿ ಪಡೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ವೈದ್ಯಕಿಯ ಪರೀೆ: ನಿಯಮಾನುಸಾರ ಪ್ರತ್ಯೇಕವಾಗಿ ಸಂತ್ರಸ್ತೆ, ಇಬ್ಬರು ಆರೋಪಿಗಳ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಮಹಜರಿನ ವೇಳೆ ಮಹತ್ತರವಾದ ಸ್ಯಾ ಸಂಗ್ರಹಿಸಲಾಗಿದೆ. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕಿಯ ಪರೀೆ ನಡೆಸಿ, ವರದಿಗಾಗಿ ಎದುರು ನೋಡಲಾಗುತ್ತಿದೆ. ಸಂತ್ರಸ್ತೆಯು ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾಳೆ. ಈಕೆಯ ಹಿನ್ನೆಲೆಯ ಬಗ್ಗೆ ಕುಟುಂಬಸ್ಥರಿಂದಲೂ ಮಾಹಿತಿಕಲೆ ಹಾಕಲಾಗುತ್ತಿದೆ.

ಖಿನ್ನತೆಯಲ್ಲಿ ಸಂತ್ರಸ್ತೆ

ಪ್ರಕರಣದ ಹಿನ್ನೆಲೆಯಲ್ಲಿ ಅಘಾತಗೊಂಡಿರುವ ಸಂತ್ರಸ್ತೆಗೆ ಕೌನ್ಸೆಲಿಂಗ್​ ನಡೆಸಲಾಗುತ್ತಿದೆ. ಹಾಗೆಯೇ ಸಾಂತ್ವನ ಕೇಂದ್ರದಲ್ಲಿ ವೈದ್ಯಕಿಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಗಳು ಕರೆಯುತ್ತಿದ್ದಂತೆ ಒತ್ತಡಕ್ಕೊಳಗಾಗಿ ಆಕೆ ಹೋಗಿದ್ದಾಳೆ. ಹಾಗೆಯೇ ನಿರಂತರ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಳಿಕ ಆಘಾತದಲ್ಲಿ ಮತ್ತೆ ರಸ್ತೆಯಲ್ಲಿ ದೀನಳಾಗಿ ಕುಳಿತುಕೊಂಡಿದ್ದು, ಈಕೆ ತೊಟ್ಟಿದ್ದ ಬಟ್ಟೆ ಅಲ್ಲಲ್ಲಿ ಹರಿದಿತ್ತು. ಇದೆಲ್ಲದರ ಬಗ್ಗೆ ಪೂರಕ ಸ್ಯಾಗಳನ್ನು ಸಂಗ್ರಹಿಸಲು ವಿಚಾರಣೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net