ಖಜ್ಜಿಡೋಣಿ ಸರ್ಕಾರಿ ಶಾಲೆ ಶತಮಾನೋತ್ಸವಕ್ಕೆ ಚಾಲನೆ ಆಕಳ ಜತೆ ಚಂದದ ಬದುಕು ಕಟ್ಟಿಕೊಳ್ಳಿ..!

Khajjidoni Government School Centenary Celebration Kicks Off Build a Beautiful Life with Aakala..!
Published on

ಕಲಾದಗಿ:ಮಹಾತ್ಮಾ ಗಾಂಧೀಜಿ ಹೇಳಿದಂತೆ ನಮ್ಮದೆನ್ನುವ ಶಿಣ ನಮ್ಮ ಮನೆಗಳಿಂದ ಬಹು ದೂರ ಹೋಗಿವೆ. ಬಹಳ ವರ್ಷಗಳೇ ಆಗಿವೆ. ನಮ್ಮತನವನ್ನು ನಮ್ಮದೆನ್ನುವ ಉತ್ತಮ ಶಿಣವನ್ನು ಒತ್ತೆಯಿಟ್ಟು ಬೇರೆಯವರದನ್ನು ಕಲಿಯುವುದೇ ಶಿಣ ಎನ್ನುವಂತಾಗಿದೆ ಎಂದು ಕನ್ಹೇರಿ&ಕೊಲ್ಹಾಪುರದ ಶ್ರೀ ಸಿದ್ಧಗಿರಿ ಸಂಸ್ಥಾನ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಇಂದಿನ ಶಿಣ ವ್ಯವಸ್ಥೆ ಬಗ್ಗೆ ವಿಷಾಧ ವ್ಯಕ್ತಪಡಿಸಿದರು.

ಸಮೀಪದ ಖಜ್ಜಿಡೋಣಿಯಲ್ಲಿ ಜಿ.ಪಂ., ಸಾರ್ವಜನಿಕ ಶಿಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಸಂಜೆ ನಡೆದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದ ಅವರು, ಮಕ್ಕಳಿಗೆ ಏನನ್ನು ಕಲಿಸಬೇಕೋ ಅದನ್ನು ಇವತ್ತಿನ ಶಿಣ ಕಲಿಸುತ್ತಿಲ್ಲ. ನಮ್ಮ ಶಿಣ, ಆಹಾರ, ಸಂಸ್ಕಾರ, ಭಾಷೆ, ಸಂಬಂಧಗಳು, ಅನ್ಯೂನ್ಯತೆ, ಪಾರಂಪರಿಕ ಕೃಷಿ, ಸ್ವಾವಲಂಬನೆಯ ದುಡಿಮೆ ಹೀಗೆ ಎಲ್ಲ ನಮ್ಮತನದಿಂದ ನಾವು ಬಹು ದೂರ ಬಂದಿದ್ದೇವೆ. ಇದು ಕಳವಳಕಾರಿಯಾದ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಸಾವಯವ ಕೃಷಿ, ಸಾತ್ವಿಕ ಆಹಾರ, ವಿಚಾರ, ಮನೆ ಮದ್ದು, ಗೋ ಸಾಕಾಣಿಕೆ ಬಗ್ಗೆ ಬಹುಹೊತ್ತು ನಿರರ್ಗಳವಾಗಿ ಮನಮುಟ್ಟುವಂತೆ ಮಾತನಾಡಿದ ಅವರು, ಚಂದಾಗಿ ಬದುಕು ಕಟ್ಟಿಕೊಳ್ಳಬೇಕೆಂದರೆ ಆಕಳದ ಸುತ್ತಮುತ್ತ ಬದುಕು ಕಟ್ಟಿಕೊಳ್ಳಿ. ಆಗ ನೋಡ್ರೀ ಬದುಕು ಎಷ್ಟು ಚಂದ ಆಗತದ ಎಂದು ಸಲಹೆ ನೀಡಿದರು.

ಭೂದಾನಿಗಳಾದ ಬಾಲಚಂದ್ರ ವಾಸನದ, ಅವಧೂತ ಶಂಕರಾಚಾರ್ಯ ಆಶ್ರಮದ ಶ್ರೀ ಶಿವಾನಂದ ಮಹಾಸ್ವಾಮಿಗಳು, ಯಂಡಿಗೇರಿಯ ವಿದ್ಯಾತಾಯಿ ಅಮ್ಮನವರು, ಖ್ಯಾತ ಆಧ್ಯಾತ್ಮಿಕ ಚಿಂತಕ ಕೃಷ್ಣಾನಂದ ಶಾಸ್ತ್ರಿಗಳು, ಶಿಣ ಇಲಾಖೆ ನಿವೃತ್ತ ಜಿಲ್ಲಾ ಉಪ ನಿರ್ದೇಶಕ ಎಂ.ಜಿ. ದಾಸರ, ಕೃಷಿ ಇಲಾಖೆ ಹಿರಿಯ ಅಧಿಕಾರಿ ಲಕ್ಷ$್ಮಣ ಕಳ್ಳೆನ್ನವರ, ಶಾಲೆ ಎಸ್​ಡಿಎಂಸಿ ಅಧ್ಯ ಸದಾಶಿವ ಮೇಟಿ ಮುಂತಾದವರು ಉಪಸ್ಥಿತರಿದ್ದರು.

ಇಂದು ಶತಮಾನೋತ್ಸವ ಸಮಾರಂಭ

ಖಜ್ಜಿಡೋಣಿಯ ಸರ್ಕಾರಿ ಕನ್ನಡ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಎರಡನೇ ದಿನವಾದ ಆ. 30 ರಂದು ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದ್ದು, ಶತಮಾನೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ಕಾಡರಕೊಪ್ಪದ ಪೂರ್ಣಾನಂದ ಆಶ್ರಮದ ಶ್ರೀ ಪಂಡಿತ ದಯಾನಂದ ಸರಸ್ವತಿ ಮಹಾಸ್ವಾಮಿಗಳು ವಹಿಸುವರು. ಅಬಕಾರಿ ಸಚಿವ ಆರ್​.ಬಿ. ತಿಮ್ಮಾಪೂರ ಉಪಸ್ಥಿತಿಯಲ್ಲಿ, ಶಿಣ ಸಚಿವ ಮಧು ಬಂಗಾರಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಜೆ.ಟಿ. ಪಾಟೀಲ ಅಧ್ಯತೆ ವಹಿಸುವರು.ಸಂಸದ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್​ ಸದಸ್ಯರಾದ ಪ್ರಕಾಶ ಹುಕ್ಕೇರಿ, ಹಣಮಂತ ನಿರಾಣಿ, ಸುನೀಲಗೌಡ ಪಾಟೀಲ, ಪಿ.ಎಚ್​. ಪೂಜಾರ, ಉಮಾಶ್ರೀ, ರಾಜ್ಯ ಸಭಾ ಸದಸ್ಯರಾದ ನಾರಾಯಣಸಾ ಕೆ. ಭಾಂಡಗೆ, ಖಜ್ಜಿಡೋಣಿ ಗ್ರಾಪಂ ಅಧ್ಯೆ ಯಲ್ಲವ್ವ ವ್ಹಿ. ಮಾದರ ಉಪಸ್ಥಿತರಿರುವರು.

ಕಲಾದಗಿ ಸಮೀಪದ ಖಜ್ಜಿಡೋಣಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿರುವ ಕನ್ಹೇರಿ& ಕೊಲ್ಹಾಪುರದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net