ಖಾತೆಯಿಂದ 50 ಸಾವಿರ ಎಗರಿಸಿದ ಖದೀಮರು

syber
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಗೊರಳ್ಳಿ ಜಗದೀಶ್ ಅವರ ಬ್ಯಾಂಕ್ ಖಾತೆಯಿಂದ 50 ಸಾವಿರ ರೂಪಾಯಿಗಳನ್ನು ಸೈಬರ್ ವಂಚಕರು ಎಗರಿಸಿದ್ದಾರೆ.


ಗೊರಳ್ಳಿ ಜಗದೀಶ್ ಅವರು ಪಿರಿಯಾಪಟ್ಟಣದ ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ಉಳಿತಾಯ ಖಾತೆ ಹೊಂದಿದ್ದು, ಮೇ 16ರಂದು ಸಂಜೆ 4.34ರಲ್ಲಿ 1100 ರೂ. ಹಾಗೂ 4.38ರಲ್ಲಿ 48,900 ರೂಪಾಯಿಗಳು ಯಾವುದೇ ಸೂಚನೆ ಇಲ್ಲದೆ ಏಕಾಏಕಿ ಖಾತೆಯಿಂದ ಡೆಬಿಟ್ ಆಗಿದೆ. ಇದರಿಂದ ಗಾಬರಿಗೊಂಡ ಜಗದೀಶ್ ಅವರು ತಕ್ಷಣ ಬ್ಯಾಂಕಿಗೆ ಕರೆ ಮಾಡಿ ಆಗಿರುವ ಘಟನೆ ಬಗ್ಗೆ ಮಾಹಿತಿ ನೀಡಿ ತಮ್ಮ ಖಾತೆಯನ್ನು ಲಾಕ್ ಮಾಡಿಸಿದ್ದಾರೆ. ಬಳಿಕ ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಶುಕ್ರವಾರ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಹಾಗೂ ಬ್ಯಾಂಕಿಗೆ ಹಣ ಏಕಾಏಕಿ ಯಾವುದೇ ಮಾಹಿತಿ ಇಲ್ಲದೆ ಡೆಬಿಟ್ ಆಗಿರುವ ಬಗ್ಗೆ ದೂರು ದಾಖಲು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net