ಕಣ್ಣಿಗೆ ಕಾರದ ಪುಡಿ ಎರಚಿ 12 ಲಕ್ಷ ದೋಚಿದ ಖದೀಮರು

IMG-20241125-WA0012.jpg
Published on

ಮೂಡಲಗಿ : ಕಳೆದ ನ.20ರಂದು ಮಧ್ಯಾಹ್ನ 3 ಗಂಟೆ ಬೈಕ್ ಅಡ್ಡಗಟ್ಟಿ ಬೈಕ್ ಸವಾರರ ಕಣ್ಣಿಗೆ ಕಾರದ ಪುಡಿ ಎರಚಿ ಅವರಲ್ಲಿದ್ದ 12 ಲಕ್ಷ ಹಣ ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೂಡಲಗಿ ತಾಲೂಕಿನ ಗುರ್ಲಾಪುರ ಬಳಿ ಇರುವ ಹಾರೂಗೇರಿ ಕ್ರಾಸ್ ಬಳಿ ಘಟನೆ ನಡೆದಿದೆ. ರಬಕವಿ - ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ಜಾಫರ್ ಮುಜಾವರ್ ಅವರ ಕಿರಾಣಿ ಹೋಲ್ ಸೇಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇರ್ಷಾರ್ ಮುಜಾವರ ಹಾಗೂ ಸಂಜು ಕೂಹಳ್ಳಿ ಎನ್ನುವವರು ಘಟಪ್ರಭಾ ಪಟ್ಟಣದ ವರೆಗೂ ಕಿರಾಣಿ ಅಂಗಡಿಗಳಿಗೆ ಹೋಲ್ ಸೇಲ್ ದರದಲ್ಲಿ ಸಾಮಗ್ರಿಗಳನ್ನು ನೀಡುತ್ತಿದ್ದರು. ನಂತರ ಪ್ರತಿ ಕಿರಾಣಿ ಅಂಗಡಿಗಳಿಗೆ ತೆರಳಿ ಹಣ ಸಂಗ್ರಹ ಮಾಡಿಕೊಂಡು ತೇರದಾಳಕ್ಕೆ ತೆರಳುವಾಗ ಘಟನೆ ನಡೆದಿದೆ.

ಸಂಜು ಹಾಗೂ ಇರ್ಷಾರ್ ಅವರು ಪ್ರತಿ ಅಂಗಡಿಗಳಿಂದ ಬಾಕಿ ಬಿಲ್ ವಸೂಲಿ ಮಾಡಿಕೊಂಡು ತೇರದಾಳಕ್ಕೆ ತೆರಳುವ ಸಂಪೂರ್ಣ ಮಾಹಿತಿ ಸಂಗ್ರಹಿಸಿಕೊಂಡ ಎರಡು ಬೈಕ್ ಮೇಲೆ ಬಂದ ನಾಲ್ವರು ಖದೀಮರು ಅವರನ್ನು ಅಡ್ಡಗಟ್ಟಿ ದೊನ್ನೆಗಳನ್ನು ತೋರಿಸಿ ಕಣ್ಣಿಗೆ ಕಾರಣ ಪುಡಿ ಎರಚಿ ಹಣ ದೋಚಿ ಪರಾಯಾಗಿದ್ದಾರೆ.

ಈ ಕುರಿತು ಹೋಲ್ ಸೆಲ್ ಅಂಗಡಿಯ ಮಾಲೀಕ ಜಾಫರ್ ಮುಜಾವರ್ ಮೂಡಲಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖದೀಮರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಖದೀಮರು ಮಹಾರಾಷ್ಟ್ರದ ಇಂಚಲ್ಕರಂಜಿ ಪಟ್ಟಣದಲ್ಲಿರುವ ಖಚಿತ ಮಾಹಿತಿ ಮೇರಿಗೆ ಗೋಕಾಕ ಡಿವೈಎಸ್ಪಿ ದೂದಪೀರ್ ಎಚ್ ಮುಲ್ಲಾ ಹಾಗೂ ಸಿಪಿಐ ಶ್ರೀಶೈಲ ಬ್ಯಾಕೂಡ, ಪಿಎಸ್ಐ ರಾಜು ಪೂಜೇರಿ ಹಾಗೂ ಸಿಬ್ಬಂದಿಗಳು ಖದೀಮರ ಬಂಧನಕ್ಕೆ ಜಾಲ ಬೀಸಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net