ಜಾಮೀನು ಪಡೆದು ಕಳ್ಳತನಕ್ಕಿಳಿದಿದ್ದ ಖದೀಮ ಅಂದರ್

arrested
Published on

ಮುಂಡರಗಿ: ಪಟ್ಟಣ ಹಾಗೂ ಅಣ್ಣಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಎಸಗಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಬಂಗಾರದ ಒಡವೆ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಕಾರ್ತಿಕ ಅಪ್ಪಣ್ಣ ಕೊಂಪಿ(24) ಬಂಧಿತ ಆರೋಪಿ. ಈತನಿಂದ 4.10 ಲಕ್ಷ ರೂ. ಕಿಮ್ಮತ್ತಿನ ಚಿನ್ನದ ಆಭರಣ ಹಾಗೂ 90 ಸಾವಿರ ರೂ. ಜಪ್ತಿ ಮಾಡಲಾಗಿದೆ. ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್‌ಪಿ ಬಿ.ಎಸ್. ನೇಮಗೌಡರ, ಬಂಧಿತನ ವಿರುದ್ಧ ಮುಂಡರಗಿ, ಶಿರಹಟ್ಟಿ, ಗದಗ ಗ್ರಾಮೀಣ ಠಾಣೆಯಲ್ಲಿ ಒಟ್ಟು 6 ಕಳ್ಳತನ ಕೇಸ್ ದಾಖಲಾಗಿವೆ. ಜಾಮೀನು ಪಡೆದು ಹೊರ ಬಂದು ಮತ್ತೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾನೆ. ಈ ಹಿನ್ನೆಲೆ ಈ ಬಾರಿ ಜಾಮೀನು ರದ್ದತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಹೆಚ್ಚುವರಿ ಪೊಲೀಸ್‌ಅಧೀಕ್ಷಕ ಎಂ.ಬಿ. ಸಂಕದ, ಡಿಎಸ್‌ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‌ಐಗಳಾದ ವಿ.ಜಿ. ಪವಾರ, ಬಿ.ಎನ್. ಯಳವತ್ತಿ, ಎಎಸ್‌ಐ ಎಸ್.ಎಂ. ಹಡಪದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net