ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರಿನ ನಾಲ್ಕು ಚಕ್ರಗಳನ್ನು ಖದೀಮರು ಕಳವು

Crime Logo
Published on

ಮೈಸೂರು: ವಿಜಯನಗರ 4ನೇ ಹಂತದಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರಿನ ನಾಲ್ಕು ಚಕ್ರಗಳನ್ನು ಖದೀಮರು ಕಳವು ಮಾಡಿದ್ದಾರೆ.

ಬಡಾವಣೆ ನಿವಾಸಿ, ಎಂಡಿಸಿಸಿ ಬ್ಯಾಂಕ್ ಉದ್ಯೋಗಿ ಶಿವಕುಮಾರ್ ಅವರು ಗುರುವಾರ ರಾತ್ರಿ ತಮ್ಮ ಕಾರನ್ನು ಮನೆಯ ಮುಂದೆ ನಿಲ್ಲಿಸಿದ್ದರು.
ಮಾರನೆಯ ಬೆಳಗ್ಗೆ 7 ಗಂಟೆ ವೇಳೆಯಲ್ಲಿ ಎದ್ದು ನೋಡಿದ ವೇಳೆ ಕಾರಿನ ನಾಲ್ಕೂ ಚಕ್ರಗಳು ಇರಲಿಲ್ಲ. ರಾತ್ರಿ ವೇಳೆ ಜಾಕ್ ಬಳಸಿರುವ ದುಷ್ಕರ್ಮಿಗಳು ಕಾರಿನ ಚಕ್ರಗಳನ್ನು ಬಿಚ್ಚಿ ಕದ್ದೊಯ್ದಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net