

ಗದಗ: ತಾಲೂಕಿನ ಹಾತಲಗೇರಿ ಗ್ರಾಮ ಕಣಗಿನಹಾಳ ರೋಡದಲ್ಲಿರುವ ಮಹೇಶಕುಮಾರ ಮೆಮೋರಿಯಲ್ ಟ್ರಸ್ಟ್ ಹಾತಲಗೇರಿ ಈ ಟ್ರಸ್ಟ್ನ ಭೂಮಿ ಪೂಜಾ ಹಾಗೂ ಅಡಿಗಲ್ಲು ಸಮಾರಂಭ ಸೋಮವಾರರಂದು ಮುಖ್ಯ ಅತಿಥಿ ಕೃಷ್ಣಗೌಡ ಹನಮಂತಗೌಡ ಪಾಟೀಲ ಸಾ. ಹುಲಕೋಟಿ ಇವರಿಂದ ಭೂಮಿ ಪೂಜೆ ನೆರವೇರಿಸಲ್ಪಟ್ಟಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಬರಸಾಬ ಬಬರ್ಚಿ ಅಧ್ಯಕ್ಷರು ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾದಿಕಾರ ಗದಗ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸತ್ಯಪ್ಪ ಭರಮಪ್ಪ ಬೇಲೇರಿ ಅಧ್ಯಕ್ಷರು, ಮಹೇಶಕುಮಾರ ಮೆಮೋರಿಯ ಟ್ರಸ್ಟ್ ಹಾತಲಗೇರಿ ಇವರು ಸರ್ವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹಾತಲಗೇರಿ ಗ್ರಾಮಸ್ಥರು, ಗ್ರಾಮ ಪಂಚಾಯತ ಸದಸ್ಯರು, ಯುವಕರು, ಅಭಿಮಾನಿಗಳು ಹಾಜರಿದ್ದರು.