Gadag: ಕೆ.ಎಚ್ ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಹುಲಕೋಟಿ ಹಾಗೂ ಎಂ. ಎಂ. ಜೋಶಿ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಹಾಗೂ ಗದಗ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ ಇವರ ಸಹಕಾರದಿಂದ ಹಾಗೂ ಶ್ರೀ ಎಚ್ ಕೆ ಪಾಟೀಲ ಸೇವಾ ತಂಡದ ಸಹಾಯದಿಂದ ಇಂದು ದಿನಾಂಕ 12/05/2025 ರ ಸೋಮವಾರದಂದು ಒಟ್ಟು 21 ಜನ ಫಲಾನುಭವಿಗಳಿಗೆ ಉಚಿತವಾಗಿ ಕಣ್ಣಿನ ಪೊರೆಯ ಶಸ್ತ್ರ ( ಮೋತಿ ಬಿಂದು ) ಚಿಕಿತ್ಸೆಯನ್ನು ಹುಲಕೋಟಿಯ ಕೆ ಎಚ್ ಪಾಟೀಲ ಆಸ್ಪತ್ರೆಯಲ್ಲಿ ಮಾಡಲಾಯಿತು ಸಂಸ್ಥೆಯ ಚೇರಮನ್ ರಾದ ಡಾ|ಎಸ್. ಆರ್. ನಾಗನೂರ ಹಾಗೂ ಗೌರವ ಕಾರ್ಯದರ್ಶಿಗಳಾದ ಡಾ| ವೇಮನ್. ಆರ್. ಸಾವಕಾರ ಇವರು ಈ ಶಿಬಿರದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು.
ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಎಂ. ಎಂ. ಜೋಶಿ ಆಸ್ಪತ್ರೆಯ ಖ್ಯಾತ ವೈದ್ಯರಿಂದ ಶಸ್ತ್ರ ಚಿಕಿತ್ಸೆಯನ್ನು ನೆಡೆಸಲಾಯಿತು. ಇದಕ್ಕೂ ಮೊದಲು ಫಲಾನುಭವಿಗಳಿಗೆ ಉಚಿತವಾಗಿ ಬಿಪಿ, ಶುಗರ್, ರಕ್ತ ತಪಾಸಣೆ ಮಾಡಲಾಯಿತು.
ಹಾಗೂ ಎಲ್ಲ ಫಲಾನುಭವಿಗಳಿಗೆ ಊಟ ಮತ್ತು ಉಪಹಾರವನ್ನು ನೀಡಲಾಯಿತು ಈ ಶಿಬಿರದಲ್ಲಿ ಕೆ. ಎಚ್. ಪಾಟೀಲ ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಂಡು ಸಹಾಯ ಸಹಕಾರ ನೀಡಿ ಶಿಬಿರದ ಯಶಸ್ಸಿಗೆ ಶ್ರಮಿಸಿದರು