ವಿದ್ಯಾರ್ಥಿಗಳೇ ಆಧುನಿಕ ಭಾರತದ ಬೆನ್ನೆಲುಬಾಗಬೇಕು: ಕೃಷ್ಣೇಗೌಡ ಎಚ್ ಪಾಟೀಲ್

IMG-20231206-WA0255
Published on

ವಿದ್ಯಾರ್ಥಿಗಳು ಇಂದಿನ ಸಮಾಜಿಕ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಬೆಳೆಯುತ್ತಿರುವ  ತಂತ್ರಜ್ಞಾನದ ಜಗತ್ತಿನಲ್ಲಿ, ಜಗತ್ತನ್ನೇ ಅಂಗೈಯಲ್ಲಿ ಇರಿಸಿಕೊಳ್ಳುವಂತೆ ಮಾಡಿದ ತಂತ್ರಜ್ಞಾನವನ್ನು ಔಪಚಾರಿಕವಾಗಿ ಜ್ಞಾನವನ್ನು ಹೆಚ್ಚಿಸಿಕೊಳ್ಳುವಲ್ಲಿ ಹಾಗೂ  ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಹಾಯವಾಗುವಂತೆ ಬಳಸಿಕೊಳ್ಳಬೇಕು. ಪದವಿ ಕೇವಲ ಅಂಕಪಟ್ಟಿಗೆ ಸೀಮಿತವಾಗಬಾರದು. ಓದು ಕೇವಲ ಪದವಿಯನ್ನು ಪಡೆಯುವುದಕ್ಕಾಗಿ ಸೀಮಿತವಾಗಬಾರದು. ಅದು ಮುಂದಿನ ನಿಮ್ಮ ಭವಿಷ್ಯದಲ್ಲಿ ಉನ್ನತ ಸ್ಥಾನವನ್ನು ಉನ್ನತ ಗುರಿಯನ್ನು ಹೊಂದುವಂತೆ ನಿಮ್ಮ ಜ್ಞಾನ ಮತ್ತು ಓದುನ್ನು ವಿಸ್ತರಿಸಿಕೊಳ್ಳಬೇಕು. ಅದೇ ರೀತಿ ಇಂದು ಭಾರತದ ಘನ ಸಂವಿಧಾನವನ್ನು ರಚಿಸಿದ ಸಂವಿಧಾನ ಶಿಲ್ಪಿ ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಅವರ 'ಮಹಾಪರಿನಿರ್ವಾಣ' ದಿನ ಅವರನ್ನು ಗೌರವ, ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತ ಸಂವಿಧಾನದಲ್ಲಿರುವ ಮಾನವೀಯ ಮೌಲ್ಯಗಳನ್ನು ನಿಮ್ಮ ಬದುಕಿನಲ್ಲಿ ಹಾಗೂ ದೈನಂದಿನ ಚಟುವಟಿಕೆಯಲ್ಲಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಮ್ಮ ಕಿವಿ ಮಾತನ್ನು ಹೇಳುತ್ತಾ ಮೈಲಾರಪ್ಪ ಮೆಣಸಗಿ  ಮಹಾವಿದ್ಯಾಲಯದಲ್ಲಿ 2023-  24 ನೇ ಸಾಲಿನ ಬಿ.ಎ ಮತ್ತು ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಂಸ್ಕೃತಿಕ ಕ್ರೀಡಾ ಮತ್ತು ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿದ ಸನ್ಮಾನ್ಯ ಶ್ರೀ ಕೃಷ್ಣಗೌಡ.ಎಚ್. ಪಾಟೀಲರು ತಮ್ಮ ಉದ್ಘಾಟನಾ ಭಾಷಣದಲ್ಲಿ ನುಡಿದರು.

ಕಠಿಣ ಪರಿಶ್ರಮ, ದೃಢವಾದ ನಿಷ್ಠೆ, ಪ್ರಾಮಾಣಿಕ ಪ್ರಯತ್ನ ಇವುಗಳನ್ನು ನಿರಂತರವಾಗಿ ಪಾಲಿಸಿದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಎಂತ ಕಷ್ಟಗಳನ್ನು ಸಹ ಎದರಿಸಿ ಬದುಕಬಹುದು.ಬದುಕನ್ನುವುದು ಹದವಾದ ಭೂಮಿ ಅದರಲ್ಲಿ ಬೀಜ ಬಿತ್ತಿದರೆ ಹೇಗೆ ಮೊಳಕೆ ಒಡೆಯುವುದು ಹಾಗೆಯೇ ವಿದ್ಯಾರ್ಥಿ ಜೀವನವೂ ಕೂಡ ಅದನ್ನು ಹಾಳು ಮಾಡಿದೇ ಹಸನಾಗಿಸಿಕೊಳ್ಳಬೇಕು. ಎಂದು ಈ ಸಮಾರಂಭದ ಮುಖ್ಯ ಅತಿಥಿಗಳಾದ, ಮೈಲಾರಪ್ಪ ಮೆಣಸಿಗಿ ಸಂಸ್ಥೆಯ ಅಧ್ಯಕ್ಷರಾದ ಡಾ. ಜಯ ದೇವ ಮೆಣಸಗಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ಆಡಳಿತ ಅಧಿಕಾರಿಗಳಾದ ಶ್ರೀ ಎನ್.ಎಮ್. ಮುಲ್ಲಾ ಅವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಬಿ. ಬಿ. ಗೌಡರ, ಡಾ.ವಿ.ಎ ನಿಂಗೊಜಿ,ಪ್ರೊಫೆಸರ್ ಎಸ್ ಜಿ ಉಳಿಗೇರ, ಪ್ರೊಫೆಸರ್ ಸಂತೋಷ್ ಬಿಂಗಿ, ಪ್ರೊಫೆಸರ್ ಎಂ. ಡಿ.ಮಾದರ್, ಅನ್ಯ ಮಹಾವಿದ್ಯಾಲಯಗಳ ಪ್ರಾಚಾರ್ಯರು ಉಪನ್ಯಾಸಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವೆಂಕಟೇಶ್ ಕಂದಗಲ್  ರ ವರು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಎನ್.ಎಸ್.ಎಸ್ ಗೀತೆಯನ್ನು ವಿದ್ಯಾರ್ಥಿನಿಯರು ಹಾಡಿದರು. ಶ್ರೀ ಮತಿ ಕವಿತಾ ಬಡಿಗೇರ್ ಉಪನ್ಯಾಸಕರು ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಮತಿ ಸುಮಿತ್ರಾ ಜೋಗಿನ ಉಪನ್ಯಾಸಕ ಪುಷ್ಪಾರ್ಪಣೆ ಗೈದರು . ಅತಿಥಿಗಳು ಹಾಗೂ ಉದ್ಘಾಟಕರ ಪರಿಚಯವನ್ನು ಎನ್.ಎಸ್.ಎಸ್ ಅಧಿಕಾರಿಗಳಾದ ಗಾಯತ್ರಿ ಮಳೇಕರ ನೆರವೇರಿಸಿದರು. ರೇಣುಕಾ ಮಠದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಿದರು. ಪ್ರಾಚಾರ್ಯರಾದ ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷರಾದ ಎಸ್. ಜಿ. ಮರಿಗುದ್ದಿಯವರು ಅಧ್ಯಕ್ಷೀಯ  ನುಡಿಗಳನ್ನು ಹೇಳಿದರು.  ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಶ್ರೀ ಬಿ.ಎಮ್.ನದ್ದಿಮುಲ್ಲಾ ನುಡಿಯುತ್ತ ಮಹಾವಿದ್ಯಾಲಯದ ಶೈಕ್ಷಣಿಕ ಹಾಗೂ ಕ್ರೀಡಾ ಬೆಳವಣಿಗೆ ಕುರಿತು ಹೇಳಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವಾಣಿಜ್ಯ ಶಾಸ್ತ್ರದ ಉಪನ್ಯಾಸಕಿಯಾದ ಶ್ರೀ ಮತಿ ಪೂರ್ಣಿಮಾ  ಪಟ್ಟಣದ ನೆರವೇರಿಸಿದರು. ಕಾರ್ಯ ಕ್ರಮವನ್ನು ಉಪನ್ಯಾಸಕರಾದ ಎಸ್.ಕೆ.ಎಮ್ . ನಿರೂಪಿಸಿದರು.ಕನ್ನಡ ಉಪನ್ಯಾಸಕರಾದ ವಿಜಯಲಕ್ಷ್ಮಿ ಚಳಗೇರಿ ಅವರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net