ಕೆಜಿಗಟ್ಟಲೆ ಚಿನ್ನ&ಲಕ್ಷಾಂತರ ರೂಪಾಯಿ ಗಾಯಾಬ್​

ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್​.
ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್​.
Published on

ವಿಜಯಪುರ: ಬ್ಯಾಂಕ್​ನಲ್ಲಿದ್ದ ಕೆಜಿಗಟ್ಟಲೆ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ಕಳವು ಮಾಡಿದ ಪ್ರಕರಣವೊಂದು ಬೆಚ್ಚಿ ಬೀಳಿಸಿದೆ.

ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಕೆನರಾ ಬ್ಯಾಂಕ್​ನಲ್ಲಿ ನಡೆದ ಈ ಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ. ತನಿಖೆಯ ದೃಷ್ಟಿಯಿಂದ ತಡವಾಗಿ ಪ್ರತಿಕ್ರಿಯೆ ನೀಡಿರುವ ಪೊಲೀಸರು ತನಿಖೆ ಚುರುಕುಗೊಂಡಿದ್ದು, ಶ್ರೀದಲ್ಲಿಯೇ ಪ್ರಕರಣ ಭೇದಿಸುವ ಸುಳಿವು ನೀಡಿದ್ದಾರೆ.

ಮೇ 23ರಂದೇ ಕಳ್ಳತನ ನಡೆದಿದ್ದು, ಮೇ 26 ರಂದು ಬ್ಯಾಂಕ್​ ಶಾಖೆಯ ಮ್ಯಾನೇಜರ್​ ಕಲೈಶ ಲಾಯಪ್ಪ ಪೂಜಾರಿ ಮನಗೂಳಿ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ. 53.26 ಕೋಟಿ ರೂ. ಮೌಲ್ಯದ 58,976,94 ಗ್ರಾಂ ಬಂಗಾರದ ಆಭರಣಗಳು ಹಾಗೂ 5,20,450 ರೂಪಾಯಿ ನಗದು ಸೇರಿ ಒಟ್ಟು 53,31,20,450 ರೂಪಾಯಿ ಮೌಲ್ಯದ ಬಂಗಾರದ ಆಭರಣ ಹಾಗೂ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಟನೆ ವಿವರ: ಬ್ಯಾಂಕ್​ ನೌಕರರ ವೇಷದಲ್ಲಿಯೇ ಬಂದಿದ್ದಾರೆನ್ನಲಾದ ಕಳ್ಳರು ಬ್ಯಾಂಕ್​ನ ಮುಖ್ಯದ್ವಾರದ ಶೆಟರ್​ಗೆ ಹಾಕಿದ ಕೀಲಿ ಹಾಗೂ ಬ್ಯಾಂಕ್​ನ ಕಿಟಕಿಯ ಸರಳುಗಳನ್ನು ಮುರಿದು ಒಳಗೆ ನುಗ್ಗಿದ್ದಾರೆ. ಸೇಫ್​ ಲಾಕರ್​ ರೂಮ್​ನ ಕೀಲಿ ತೆಗೆದು ಅದರೊಳಗೆ ಕಬ್ಬಿಣದ ಬಾಗಿಲಿನ ಸರಳುಗಳನ್ನು ಕತ್ತರಿಸಿ ಒಳಹೊಕ್ಕಿದ್ದಾರೆ. ಟ್ರೇಜರಿ ತೆಗೆದು ಅದರಲ್ಲಿದ್ದ ಒಟ್ಟು ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ. ವಾಮಾಚಾರ ಕೂಡ ನಡೆದಿದೆ ಎಂಬುದಕ್ಕೆ ಅಲ್ಲಿದ್ದ ಪೂಜಾ ಸಾಮಗ್ರಿ ಸಾಕ್ಷಿಯಾಗಿದೆ. ಅಲ್ಲದೆ, ಒಳಗಡೆ ಖಾರದ ಪುಡಿ ಎರಚಿದ್ದು ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ದಿಕ್ಕು ತಪ್ಪಿಸುವ ಹುನ್ನಾರ ಎಂದು ಪರಿಗಣಿಸಲಾಗಿದೆ. ಸಿಸಿ ಕ್ಯಾಮರಾದ ಎನ್​ವಿಆರ್​ ಸಹ ತೆಗೆದುಕೊಂಡು ಹೋಗಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಎಸ್​ಪಿ ಲಕ್ಷ್ಮಣ ನಿಂಬರಗಿ ಹಾಗೂ ಎಸ್​ಪಿ ರಾಮನಗೌಡ ಹಟ್ಟಿ ಮತ್ತು ಸಿಪಿಐ ರಮೇಶ ಅವಜಿ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ತನಿಖೆಗೆ 8 ವಿಶೇಷ ತಂಡ ರಚಿಸಲಾಗಿದ್ದು, ಎಲ್ಲ ಆಯಾಮಗಳಿಂದ ತನಿಖೆ ಚುರುಕುಗೊಳಿಸಿದ್ದಾಗಿ ಎಸ್​ಪಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net