ಆರೋಗ್ಯಕರ ಬದುಕಿಗೆ ಕ್ರೀಡೆಗಳು ಅಗತ್ಯ,  ಎಚ್.ಎನ್. ನಂದಕುಮಾರ ಅಭಿಮತ, ಕೆಜಿಪಿಎಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ

IMG-20250705-WA0025_1-3.jpg
Published on

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಆಯೋಜಿಸಿರುವ ಕರ್ನಾಟಕ ಜಿಮ್ಖಾನ್ ಪ್ರಿಮಿಯರ್ ಲೀಗ್ (ಕೆಜಿಪಿಎಲ್) ಸೀಸನ್-4 ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಲಾಯಿತು.

ಕರ್ನಾಟಕ ಜಿಮ್ಖಾನಾ ಅಸೋಸಿಯೇಶನ್ (ಕೆಜಿಎ) ಕೋರ್ಟ್ ನಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ದಿನದ ಅಂಗವಾಗಿ ಏರ್ಪಡಿಸಿರುವ ಟೂನಿರ್ಯಲ್ಲಿ ನಾಲ್ಕು ತಂಡಗಳು ಆಡಲಿವೆ.

ಪ್ರಕಾಶ ಪಾಟೀಲ ಇವರ ಮಾಲೀಕತ್ವದ ಎಕ್ಸ್ಸ್ ಐಕಾನ್ಸ್ , ಶುಭಂ ಕಾಟವೆ ಇವರ ಮಾಲಿಕತ್ವದ ಶುಭಮ್ಸ್ ಸ್ಮ್ಯಾಶ್ ಸ್ಕ್ವಾಡ್, ಮೈಕಲ್ ರಾಬರ್ಟ ಮಾಲೀಕತ್ವದ ಮೈಕ್ಸ್ ಅನ್ಮ್ಯಾಚೇಬಲ್ ಮತ್ತು ಆದಿತ್ಯ ಎಚ್.ಎನ್. ಮಾಲೀಕತ್ವದ ವಿಭವ ವೇಲಪ್ಸ್ ತಂಡಗಳು ಭಾಗವಹಿಸಿವೆ.

ಶ್ರೀ ದುರ್ಗಾ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ ಎಂಡಿ ವೀರೇಶ ಉಂಡಿ ಅವರು ಪಂದ್ಯಾವಳಿ ಉದ್ಘಾಟಿಸಿ ಶುಭ ಹಾರೈಸಿದರು.

ಕೆಜಿಎ ಅಧ್ಯಕ್ಷ ಎಚ್.ಎನ್. ನಂದಕುಮಾರ ಮಾತನಾಡಿ, ಕೆಜಿಎ ತಂಡ ಇಡೀ ಪಂದ್ಯಾವಳಿ ಆಯೋಜನೆಗೆ ಶ್ರಮಿಸಿದೆ. "ಸ್ಟಾಪ್ ಟೆರರಿಸಂ'ಘೋಷಣೆಯಡಿ ಪಂದ್ಯಾವಳಿ ಏರ್ಪಡಿಸಿದ್ದು, ಎಲ್ಲರೂ ಕ್ರೀಡಾ ಸ್ಪೂರ್ತಿಯಿಂದ ಆಡಬೇಕು. ಆಟಗಾರರು ಎಲ್ಲರೂ ಹೆಚ್ಚು ಆಸಕ್ತಿಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆರೋಗ್ಯಕರ ಬದುಕಿಗೆ ಕ್ರೀಡೆಗಳು ಅಷ್ಟೇ ಮುಖ್ಯ ಎಂದರು.

ಉಪಾಧ್ಯಕ್ಷ ಗೋವಿಂದ ಜೋಶಿ ಮಾತನಾಡಿ, ಪ್ರತಿ ವರ್ಷ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸುತ್ತ ಬರಲಾಗಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಮಕ್ಕಳು, ಯುವಕರು, ಮಹಿಳೆಯರು ಸೇರಿ ಎಲ್ಲ ವಯೋಮಾನದವರು ಪಾಲ್ಗೊಂಡಿದ್ದಾರೆ. ಈ ಮೂಲಕ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ. ಇದರೊಂದಿಗೆ ಹೊಸ ಪ್ರತಿಭೆಗಳು ಹೊರಹೊಮ್ಮಲಿ ಎಂದು ಆಶಿಸಿದರು.

ಕೆಜಿಎ ಕಾರ್ಯದರ್ಶಿ ವೀರಣ್ಣ ಸವಡಿ ಮಾತನಾಡಿ, ಅಸೋಸಿಯೇಶನ್ ನಿಂದ ಇದು ನಾಲ್ಕನೇ ಆವೃತ್ತಿಯಾಗಿದ್ದು, 56 ಜನ ಕ್ರೀಡಾಪಟುಗಳು ಬ್ಯಾಡ್ಮಿಂಟನ್ ಆಡಲಿದ್ದಾರೆ ಎಂದರು.

ಸಂಯೋಜಕ ಉದಯ ಬಾಡಕರ ನಿರ್ವಹಿಸಿದರು.
ದಿನೇಶ ಶೆಟ್ಟಿ, ಲಿಂಗರಾಜ ಪಾಟೀಲ, ವಿನಯ ಜವಳಿ, ಜಾನ್ ರಾರ್ಬಟ್, ನವ್ಯಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net