ಹುಬ್ಬಳ್ಳಿ: ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ವತಿಯಿಂದ 4ನೇ ಆವೃತ್ತಿಯ ಕರ್ನಾಟಕ ಜಿಮ್ಖಾನಾ ಪ್ರೀಮಿಯರ್ ಲೀಗ್ (ಕೆಜಿಪಿಎಲ್) 4 ಬ್ಯಾಡ್ಮಿಂಟನ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ಜು. 5ರಂದು ಸಂಜೆ 5.30ಗಂಟೆಗೆ ನಡೆಯಲಿದೆ. ದೇಶಪಾಂಡೆ ನಗರದ ಕೆಜಿಎ ಮೈದಾನದಲ್ಲಿರುವ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್ನ ಎಂಡಿ ವೀರೇಶ ಉಂಡಿ ಹಾಗೂ ಉದ್ಯಮಿ ಸಮುಂದರ ಸಿಂಗ್ ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕೆಜಿಎ ಚೇರ್ಮನ್ ನಂದಕುಮಾರ ಎಚ್.ಎನ್. ಹಾಗೂ ಉಪಾಧ್ಯಕ್ಷ ಗೋವಿಂದ ಜೋಶಿ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ವೀರಣ್ಣ ಸವಡಿ ಹಾಗೂ ಕೆಜಿಪಿಎಲ್ ಸಂಯೋಜಕ ಉದಯ ಬಾಡಕರ ಪ್ರಕಣೆಯಲ್ಲಿ ತಿಳಿಸಿದ್ದಾರೆ.