ಕೆಜಿಪಿಎಲ್ 3ನೇ ಆವೃತ್ತಿ

Published on

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಕರ್ನಾಟಕ ಜಿಮಖಾನ ಅಸೋಸಿಯೇಶನ್ ನಲ್ಲಿ ಪ್ರತಿ ವರ್ಷದಂತೆ ಕರ್ನಾಟಕ ಜಿಮ್ಖಾನ ಪ್ರೀಮಿಯರ್ ಲೀಗ್ (ಕೆಜಿಪಿಎಲ್) 3ನೇ ಆವತ್ತಿಯು ಜುಲೆ 5 ರಂದು ಸಂಜೆ 5.30ಕ್ಕೆ ಪ್ರಾರಂಭವಾಗಲಿದೆ.

ಶ್ರೀ ದುರ್ಗಾ ಡೆವಲಪರ್ ಮಾಲೀಕ ವೀರೇಶ ಉಂಡಿ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಜಿಮಖಾನ ಚೇರ್ಮನ್ ಎಚ್.ಎನ್. ನಂದಕುಮಾರ ಅಧ್ಯತೆ ವಹಿಸುವರು.

ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರದಿಪ ಶೆಟ್ಟರ್, ಉದ್ಯಮಿ ಗೋವಿಂದ ಜೋಶಿ ಭಾಗವಹಿಸಲಿದ್ದಾರೆ.

ಒಟ್ಟು 4 ತಂಡಗಳು ಭಾಗವಹಿಸಲಿದ್ದು, ವಿಮಲ್ ಗೋಟಡಕಿ ಮಾಲೀಕತ್ವದ ದಿ ಸ್ಮಾಶಿಂಗ್ 11, ಆದಿತ್ಯ ನಂದಕುಮಾರ ಮಾಲೀಕತ್ವದ ವಿಭವ ವಾಲೋಪ್ಸ್, ಸಂಕಲ್ಪ ಶೆಟ್ಟರ್ ಮತ್ತು ಕಾತಿರ್ಕ್ ದೇಸಾಯಿ ಮಾಲೀಕತ್ವದ ದೇಶ್ವಾರಿಯರ್ಸ್ ಮತ್ತು ಮೈಕಲ್ ರಾರ್ಬಟ್ ಮಾಲೀಕತ್ವದ ಮೆಕ್ಸ್ ಅನ್ಮ್ಯಾಚೆಬಲ್ಸ್. ಸುಮಾರು 44 ಆಟಗಾರರು 6 ವಾರ ಪ್ರತಿ ಶನಿವಾರ ಮತ್ತು ಭಾನುವಾರದಂದು ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಮಖಾನ ಕಾರ್ಯದರ್ಶಿ ವೀರಣ್ಣ ಸವಡಿ ಮತ್ತು ಪಂದ್ಯಾಟದ ಸಂಯೋಜಕ ಉದಯ್ ಬಾಡಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net