ಉತ್ಕೃಷ್ಟ ಆಭರಣಗಳಿಗೆ ಕೆಜಿಪಿ ಜುವೆಲರಿ,  ರಾಯಭಾರಿ ರಾಗಿಣಿ ದ್ವಿವೇದಿ ಅಭಿಮತ

IMG-20250824-WA0014-1.jpg
Published on

ಹುಬ್ಬಳ್ಳಿ: ಅತ್ಯಂತ ಉತ್ಕೃಷ್ಟ ಹಾಗೂ ವೈವಿಧ್ಯಮಯ ವಿನ್ಯಾಸದ ಆಭರಣಗಳಿಗೆ ಹೆಸರುವಾಸಿಯಾದ ಕೆಜಿಪಿ ಜುವೆಲರಿ ಶೋರೂಮ್ ಗಳು ಸದ್ಯ ರಾಜ್ಯದ 21 ಕಡೆಗಳಲ್ಲಿವೆ. ಮಳಿಗೆಗಳ ಸಂಖ್ಯೆಯಲ್ಲಿ ಇದೇ ವರ್ಷದಲ್ಲಿ 30ಕ್ಕೆ ಏರಿಸುವ ಉದ್ದೇಶ ಹೊಂದಲಾಗಿದೆ ಎಂದು ಮಾಲೀಕರಾದ ಗಣೇಶ ಶೇಟ್ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಕಡಿಮೆ ಮೇಕಿಂಗ್ ಚಾರ್ಜ್ ಹಾಗೂ ಆಭರಣಗಳ ದರದಲ್ಲಿಯೂ ಇತರರಿಗಿಂತ ಕಡಿಮೆ ಇರುವುದರಿಂದ ಗ್ರಾಹಕರಿಗೆ ಹಿತಕಾರಿಯಾಗಿದೆ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಜಿಪಿ ವ್ಯವಹರಿಸುತ್ತದೆ. ನಾವೇ ಸ್ವತಃ ಆಭರಣ ಉತ್ಪಾದಕರು ಆಗಿರುವುದರಿಂದ ತಯಾರಿಕೆ ವೆಚ್ಚವನ್ನು ಕಡಿಮೆ ಮಾಡಿ ಅದರ ಲಾಭವನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ ಎಂದರು.

ಕೆಜಿಪಿ ಜುವೆಲರಿ ಎಂಡಿ ಸಂತೋಷ ಜಿ. ಶೇಟ್ ಮಾತನಾಡಿ, ದಾವಣಗೆರೆಯಲ್ಲಿ 1975ರಲ್ಲಿ ಮೊದಲ ಮಳಿಗೆ ಆರಂಭಿಸಲಾಯಿತು. ಹುಬ್ಬಳ್ಳಿಯಲ್ಲಿ ಎರಡನೇ ಮಳಿಗೆ ಪ್ರಾರಂಭವಾದ ನಂತರ ಬಿಜಿನೆಸ್ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಿತು. ಹಾಸನ, ಕೊಪ್ಪಳ, ವಿಜಯಪುರ, ಹಾವೇರಿ, ಚಿತ್ರದುರ್ಗ, ಗಂಗಾವತಿ ಮುಂತಾದೆಡೆ ಶಾಖೆಗಳು ಆರಂಭವಾಗಿವೆ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳು ಸೇರಿ ದೇಶಾದ್ಯಂತ 50 ಮಳಿಗೆ ತೆರೆಯುವ ಬೃಹತ್ ಯೋಜನೆ ಹಾಕಿಕೊಳ್ಳಲಾಗಿದೆ. ಇದಲ್ಲದೇ ಹೋಟೆಲ್ ಹಾಗೂ ಟೆಕ್ಸಟೈಲ್ ಉದ್ಯಮವನ್ನು ನಡೆಸುತ್ತಿದ್ದೇವೆ. ಕೆಜಿಪಿ ಜುವೆಲರಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರನ್ನು ನೇಮಕ ಮಾಡಲಾಗಿದೆ ಎಂದರು.

ನಟಿ ರಾಗಿಣಿ ದ್ವಿವೇದಿ ಮಾತನಾಡಿ, ಕೆಜಿಪಿ ಅತ್ಯಂತ ಉತ್ತಮ ಹಾಗೂ ಕಡಿಮೆ ವೆಚ್ಚದಲ್ಲಿ ಗ್ರಾಹಕರಿಗೆ ಆಭರಣ ನೀಡುತ್ತಿದೆ. ಗ್ರಾಹಕರ ಕೊಳ್ಳುವ ಶಕ್ತಿಗೆ ಅನುಸಾರ ಆಭರಣ ಮಾಡಿ ಕೊಡುವ ಸಂಪ್ರದಾಯ ಕೆಜಿಪಿಯಲ್ಲಿದೆ. ಇಂತಹ ಉತ್ತಮ ಕಾರ್ಯಗಳು ನನಗೆ ಹಿಡಿಸಿವೆ. ಹಾಗಾಗಿ ರಾಯಭಾರಿಯಾಗಿರುವುದಕ್ಕೆ ಖುಷಿ ಹಾಗೂ ಹೆಮ್ಮೆ ಅನಿಸುತ್ತದೆ ಎಂದರು.

ಸ್ಪರ್ಧಾ ಯುಗದಲ್ಲಿ ಜುವೆಲರಿ ಶಾಪ್ ನಡೆಸುವುದು ಕಷ್ಟದ ಕೆಲಸ, ನಾನೊಬ್ಬ ಕನ್ನಡತಿಯಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯಮ ಬೆಳೆಸುತ್ತಿರುವ ಕೆಜಿಪಿಯವರಿಗೆ ನನ್ನ ಬೆಂಬಲ ಇದೆ. ಕೆಜಿಪಿಯವರು ಗ್ರಾಹಕರ ಸಂತೃಪ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.

ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಿ:
ಯಾವುದೇ ಕ್ಷೇತ್ರ ಇರಲಿ ಟ್ರೆಂಡ್ ಗೆ ತಕ್ಕಂತೆ ಬದಲಾಗಬೇಕು. ಚಲನಚಿತ್ರ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಐದು ವರ್ಷದ ಹಿಂದಿನ ಸಿನಿಮಾ ಈಗ ಹಿಡಿಸಲಿಕ್ಕಿಲ್ಲ. ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಬರಬೇಕು. ಕಾಲಕ್ಕೆ ತಕ್ಕಂತೆ ನಾವೂ ಕೂಡ ಬದಲಾಗಬೇಕು ಎಂದ ರಾಗಿಣಿ ಅವರು, ನನ್ನ ಕೈಯಲ್ಲಿ ಈಗ ಐದು ಸಿನಿಮಾಗಳಿವೆ. ಮೂರು ಕನ್ನಡ, ಇತರ ಭಾಷೆಯ ಎರಡು ಚಿತ್ರಗಳಿವೆ. ಕನ್ನಡಿಗರ ಪ್ರೀತಿ ವಿಶ್ವಾಸ ಸದಾ ನನ್ನ ಮೇಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net