ಅಲ್ಲಮಪ್ರಭು ಆರಾಧನಾ ಮಹೋತ್ಸವ ಸಂಪನ್ನ

Published on

ಗುಂಡ್ಲುಪೇಟೆ : ತಾಲೂಕಿನ ಶೀಲವಂತಪುರ ಗ್ರಾಮದಲ್ಲಿ ಶುಕ್ರವಾರ ಅಲ್ಲಮಪ್ರಭುಗಳ ಆರಾಧನಾ ಮಹೋತ್ಸವ ಶುಕ್ರವಾರ ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಆರಾಧನೆ ಅಂಗವಾಗಿ ಆಯೋಜಿಸಿದ್ದ ಪುಷ್ಪಾಂದೋಳಿಕೋತ್ಸವದಲ್ಲಿ ಪಡಗೂರು ಅಡವಿ ಮಠಾಧ್ಯಕ್ಷ ಶ್ರೀ ಶಿವ ಲಿಂಗೇಂದ್ರಸ್ವಾಮೀಜಿ ಅವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮಂಗಳವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು. ಗ್ರಾಮದ ಹೊರ ವಲಯದಲ್ಲಿರುವ ಪ್ರಭುಗಳ ಗದ್ದುಗೆಗೆ ಸಾವಿರಾರು ಜನ ಪೂಜೆ ಸಲ್ಲಿಸಿ ಭಕ್ತಿ, ಭಾವ ಮೆರೆದರು. ಅಕ್ಕಪಕ್ಕದ ಗ್ರಾಮಗಳ ಸಾವಿರಾರು ಭಕ್ತರು ಆರಾಧನೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net