ಕೊಳ್ಳೇಗಾಲ ಲಯನ್ಸ್ ವಿದ್ಯಾಸಂಸ್ಥೆಯಲ್ಲಿ ವಿವಿಧ ಸ್ಪರ್ಧೆ

15-kollegal photo-2,,,,, ()
Published on

ಕೊಳ್ಳೇಗಾಲ: ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣ ಅನುಭವ ಮಂಟಪದ ಮೂಲಕ ಜಾತ್ಯತೀತ ತತ್ವದ ಮಹತ್ವ ಸಾರಿದ್ದರು ಎಂದು

ಮುಡಿಗುಂಡ ವಿರಕ್ತಮಠದ ಶ್ರೀಕಂಠ ಸ್ವಾಮೀಜಿ ಹೇಳಿದರು. ಪಟ್ಟಣದ ಲಯನ್ಸ್ ವಿದ್ಯಾಸಂಸ್ಥೆ ಆವರಣದಲ್ಲಿ ಬುಧವಾರ ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ, ಶರಣ ಭಿಕ್ಷದಾರ್ಯ ಲಿಂ.ದೇವರಗುಡ್ಡಪ್ಪ ಮಹದೇವಮ್ಮ ಕೊಂಗರಹಳ್ಳಿ ದತ್ತಿ ಹಾಗೂ ಲಿಂಗೈಕ್ಯ ಮಂಗಲದ ತೋಟದ ಮನೆ ಮಹಾದೇವಪ್ಪ ದತ್ತಿ ಸಹಯೋಗದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 17ನೇ ವರ್ಷದ ವಚನ ಗಾಯನ, ಪ್ರಬಂಧಸ್ಪರ್ಧೆ, ಭಾಷಣ ಸ್ಪರ್ಧೆ, ಶರಣರ ಭಾವಚಿತ್ರ ಕಲಾ ಸ್ಪರ್ಧೆ ಹಾಗೂ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣ ಹಾಗೂ ಇತರ ವಚನಕಾರರು ನಮ್ಮ ಸಮುದಾಯ, ಸಮಾಜ ವ್ಯವಸ್ಥೆ ಹೇಗಿರಬೇಕು ಎಂದು ತೋರಿಸಿಕೊಟ್ಟಿದ್ದಾರೆ. ವಚನಗಳು ಸಮಾಜದ ಪಿಡುಗು, ಅಂಕುಡೊಂಕುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿವೆ. ಅನುಭವ ಮಂಟಪವು ನಮ್ಮ ಸಂವಿಧಾನಕ್ಕೆ ಮಾದರಿಯಾಗಿದೆ. ಇದನ್ನು ಎಲ್ಲರೂ ಅರಿಯಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net