ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ರಕ್ಷಣೆ

14-kollegalphoto-3,, resque
Published on

 ಕೆರೆಯಿಂದ ಹೊರತಂದ ಅಗ್ನಿಶಾಮಕ ದಳ ಸಿಬ್ಬಂದಿ

್ಕೊಳ್ಳೇಗಾಲ: ಪಟ್ಟಣದ ಚಿಕ್ಕರಂಗನಾಥ ಕೆರೆಗೆ ಇಳಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬಳನ್ನು ಶುಕ್ರವಾರ ಪಟ್ಟಣ ಪೊಲೀಸರು ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದರು. ಚಾಮರಾಜನಗರ ಅಮ್ಮನಪುರ ಗ್ರಾಮದ ನಿವಾಸಿ ಶೇಷು ಅವರ ಪತ್ನಿ ಪುಷ್ಪಾ (27) ಎಂಬಾಕೆ ಆತ್ಮ ಹತ್ಯೆಗೆ ಯತ್ನಸಿದವರು. ಒಂದು ವಾರದ ಹಿಂದೆ ಅಮ್ಮನಪುರ ಗ್ರಾಮ ತೊರೆದು ಕೊಳ್ಳೇಗಾಲದ ಕಡೆಗೆ ಈಕೆ ಬಂದಿದ್ದಾಳೆ. ಶುಕ್ರವಾರ

ಸಿದ್ದಯ್ಯನಪುರ ರಸ್ತೆಯ ಕೆರೆಗೆ ಬೆಳಗ್ಗೆ 9.30ರ ಸಮಯದಲ್ಲಿ ಇಳಿದು ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ಬೇಸಿಗೆ ಕಾರಣ ಕೆರೆ ನೀರು ತಕ್ಕಮಟ್ಟಿಗೆ ಕಡಿಮೆ ಆಗಿತ್ತು. ಕೆರೆಯ ಬದಿಯಲ್ಲಿ ಕೆಸರಿನ ತಿಟ್ಟೆ ಇದ್ದ ಕಾರಣ

ಮಹಿಳೆ ಅದರ ಮೇಲೆ ನಡೆದು ಕೊಂಡೇ ನೀರಿನ ಬಳಿ ತೆರಳಿದ್ದಳು. ಕೇವಲ ತಲೆ ಭಾಗ ಮಾತ್ರ ಕಾಣುತ್ತಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಈಕೆಯ ಹುಚ್ಚಾಟ ಗಮನಿಸಿ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಕರೆಸಿ ಹಗ್ಗದ ಸಹಾಯದಿಂದ ಆಕೆಯನ್ನು ದಡಕ್ಕೆ ಕರೆತಂದರು. ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸ ಲಾಯಿತು. ಆಕೆಯ ಪತಿ ಶೇಷು, ತಾಯಿ ರಾಜಮ್ಮ ಅವರನ್ನು ಠಾಣೆಗೆ ಕರೆಸಿ ಪೂರ್ಣ ಮಾಹಿತಿ ಪಡೆಯಲಾಯಿತು. ಪುಷ್ಪಾ ಈಗಾಗಲೇ ಖಿನ್ನತೆಗೆ ಒಳಗೊಳಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗೆ ಮಹಿಳೆಯನ್ನು ಚಾಮ ರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net