ನಾಗರ ಹಾವು ಕಡಿದು ಮಗು ಸಾವು

SnakeBite-c2c1e399873d451d9893b6892e4d910d
Published on

ಹೊಸಪೇಟೆಯಿಂದ ಕೂಲಿಗಾಗಿ ಬಂದಿದ್ದ ದಂಪತಿ ಆಕ್ರಂದನ

ಕೊಳ್ಳೇಗಾಲ : ತಾಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ನಾಗರ ಹಾವು ಕಡಿದು ಒಂದು ವರ್ಷ ಹನ್ನೊಂದು ತಿಂಗಳ ಗಂಡು ಮಗು ಮೃತಪಟ್ಟಿದೆ. ವಿಜಯನಗರ ಜಿಲ್ಲೆ ಹೊಸಪೇಟೆಯಿಂದ ಕಬ್ಬು ಕಟಾವು ಮಾಡಲು ಬಂದಿದ್ದ ಕೂಲಿ ಕಾರ್ಮಿಕರಾದ ಗೀತಾ ಬಾಯಿ ಮತ್ತು ಶ್ರೀಧರ ದಂಪತಿಯ ಪುತ್ರ ಅಜಯ್ ಮೃತ.

ರಾಜಮ್ಮ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ದಂಪತಿ, ಕಬ್ಬು ಕಟ್ಟಾವು ಕೆಲಸದ ಸಂದರ್ಭ ಜಮೀನಿನಲ್ಲಿ ಬೆಡ್ ಶೀಟ್ ಹಾಸಿ ಮಗುವನ್ನು ಮಲಗಿಸಿದ್ದರು. ಕಬ್ಬಿನ ಗದ್ದೆಯಿಂದ ಹೊರಬಂದ ಹಾವೊಂದು ಮಗುವನ್ನು ಕಚ್ಚಿತು.

ಮಗು ಚೀರಿದ್ದನ್ನು ಕೇಳಿದ ಪಾಲಕರು ಧಾವಿಸಿ ಬಂದು ನೋಡಿದಾಗ ಹಾವು ಕಚ್ಚಿರುವುದು ಗಮನಕ್ಕೆ ಬಂತು.

ಮಗುವಿಗೆ ಕಾಮಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮಗು ಶನಿವಾರ ಮೃತ ಪಟ್ಟಿತು. ಗೀತಾ ಬಾಯಿ ಮತ್ತು ಶ್ರೀಧರ ದಂಪತಿ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net