ಕೆಜಿಎಫ್ ತಾತ ಖ್ಯಾತಿಯ ಕೃಷ್ಣೋಜಿರಾವ್ ಇನ್ನಿಲ್ಲ

KGF Tatha fame Krishnaji Rao
Published on

ಬೆಂಗಳೂರು: ಕೆಜಿಎಫ್ ತಾತ ಖ್ಯಾತಿಯ ಕೃಷ್ಣೋಜಿರಾವ್(70) ಬುಧವಾರ ನಿಧನರಾದರು.

ನ.31ರ ತಡರಾತ್ರಿ ಮನೆಯಲ್ಲಿ ಸುಸ್ತಾಗಿ ಬಿದ್ದ ಕೃಷ್ಣೋಜಿರಾವ್​ ಅವರನ್ನು ಕುಟುಂಬಸ್ಥರು ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಗೆ ದಾಖಲಿಸಿದ್ದರು. ಲಂಗ್ಸ್​ಗೆ ಸೋಂಕು ತಗುಲಿದ್ದರಿಂದ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನುರಿತ ವೈದ್ಯರ ತಂಡ ಒಂದು ವಾರದಿಂದ ಚಿಕಿತ್ಸೆ ನೀಡಿತ್ತಾದರೂ ಫಲಿಸದೆ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.

ಕೆಜಿಎಫ್ ಸಿನಿಮಾದಲ್ಲಿ ತಾತನ ಪಾತ್ರದಲ್ಲಿ ಬಣ್ಣ ಹಚ್ಚಿದ್ದ ಕೃಷ್ಣೋಜಿರಾವ್​ ಅವರು ಕೆಜಿಎಫ್​ ತಾತ ಎಂದೇ ಖ್ಯಾತಿ ಪಡೆದರು. ನಂತರ ಸಾಕಷ್ಟು ಸಿನಿಮಾಗಳು ಇವರನ್ನು ಅರಸಿಕೊಂಡು ಬಂದವು. ‘ನ್ಯಾನೋ ನಾರಾಯಣಪ್ಪ’ ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದ್ದರು. ಈ ಸಿನಿಮಾದಲ್ಲಿ ಕೌಬಾಯ್ ಗೆಟಪ್​ನಲ್ಲಿ ಕಾಣಿಸಿಕೊಂಡ ಕೃಷ್ಣೋಜಿರಾವ್​, 70ನೇ ವಯಸ್ಸಲ್ಲಿ ಹೀರೋ ಆಗುವ ಕನಸನ್ನೂ ಈಡೇರಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net