

ಮೈಸೂರು: ಕೆ.ಜಿ. ಕೊಪ್ಪಲಿನ ಶ್ರೀ ಚಾಮುಂಡೇಶ್ವರಿ ದೇವಾಲಂುದ 35ನೇ ವಾರ್ಷಿಕೋತ್ಸವ ಮಂಗಳವಾರ ಶ್ರದ್ಧಾ, ಭಕ್ತಿಯೊಂದಿಗೆ ನೆರವೇರಿತು. ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.
ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿವಿಧ ದೇವತಾ ಕಾರ್ಯಗಳು ನಡೆಯಿತು. ಹೋಮ, ಕುಂಭಾಭಿಷೇಕ ನೆರವೇರಿಸಿದ ಬಳಿಕ ಮಹಾ ಮಂಗಳಾರತಿ ನಡೆಯಿತು. ಕೆ.ಜಿ. ಕೊಪ್ಪಲು ಹಾಗೂ ನಗರದ ವಿವಿಧ ಕಡೆಗಳಿಂದ ಸಾಕಷ್ಟು ಭಕ್ತಾದಿಗಳು ಆಗಮಿಸಿದ್ದರು.
ದೇವಾಲಂುದ ಆಡಳಿತ ಮಂಡಳಿ ಗೌರವಾಧ್ಯಕ್ಷ ನಿಂಗಣ್ಣ, ಅಧ್ಯಕ್ಷ ಡಿ.ಗಿರೀಶ್, ಉಪಾಧ್ಯಕ್ಷ ವಿಕ್ರಾಂತ್ ದೇವೇಗೌಡ ನೇತೃತ್ವದಲ್ಲಿ ಅನ್ನಸಂತರ್ಪಣೆ ನಡೆಯಿತು. ವಾಜಿ ಶಾಸಕ ಎಲ್.ನಾಗೇಂದ್ರ, ಮುಡಾ ವಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ವಾಜಿ ಮೇಯರ್ ಆರ್.ಲಿಂಗಪ್ಪ, ನಗರಪಾಲಿಕೆ ವಾಜಿ ಸದಸ್ಯರಾದ ನಿಂಗಣ್ಣ, ಚನ್ನಪ್ಪ, ಎಸ್.ಬಾಲು, ಧರ್ಮದರ್ಶಿ ನಿಂಗಪ್ಪ, ಕಾಂರ್ುದರ್ಶಿ ಮಲ್ಲೇಗೌಡ, ಖಜಾಂಚಿ ವಿ.ರಾಜಣ್ಣ, ಸಹ ಕಾಂರ್ುದರ್ಶಿ ಬಿ.ಲಕ್ಷ್ಮಣ್ ಮುಂತಾದವರು ಇದ್ದರು.