

ಪುತ್ತೂರು ಗ್ರಾಮಾಂತರ: ಕೆಯ್ಯೂರು ದುರ್ಗಾಪರಮೇಶ್ವರಿ-ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಾ.21ರಿಂದ 28ರ ತನಕ ನಡೆಯುವ ವಾರ್ಷಿಕ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಪೂರ್ವಸಿದ್ಧತಾ ಸಭೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು ಅಧ್ಯಕ್ಷತೆಯಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕ್ಷೇತ್ರದ ಅರ್ಚಕ ಶ್ರೀನಿವಾಸ ರಾವ್, ಉಮಾಕಾಂತ ಬೈಲಾಡಿ, ಅಶೋಕ್ ರೈ ದೇರ್ಲ, ದಾಮೋದರ ಪೂಜಾರಿ ಕೆಂಗುಡೇಲು, ಸುಜಯ ಕೆಯ್ಯೂರು, ಜಾತ್ರೋತ್ಸವದ ಉಪಸಮಿತಿಗಳ ಸಂಚಾಲಕ ಶರತ್ ಕುಮಾರ್ ಮಾಡಾವು, ರಾಮಕೃಷ್ಣ ಭಟ್ ಮೆರ್ಲ, ದೇವಣ್ಣ ನಾಯ್ಕ, ಜಯಂತ ಪೂಜಾರಿ ಕೆಂಗುಡೇಲು, ಪ್ರವೀಣ್ ಕಟ್ಟತ್ತಾರು, ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.