ರಾಸಾಯನಿಕ ಔಷಧ ಸಿಂಪಡಿಸಿ ಈರುಳ್ಳಿ ಬೆಳೆ ನಾಶ

Poison, Chemical, Drug, Onion, Crop Destruction, Kolhar, Police Station,
ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮದ ರೈತ ಭೀಮಪ್ಪ ಕುಬಕಡ್ಡಿ ಅವರ ಜಮೀನಿನಲ್ಲಿ ರಾಸಾಯನಿಕ ಔಷಧಿ ಹೊಡೆದ ಪರಿಣಾಮವಾಗಿ ಒಂದು ಎಕರೆ ಈರುಳ್ಳಿ ಸಂಪೂರ್ಣ ಒಣಗಿರುವುದು.
Published on

ಕೊಲ್ಹಾರ: ವಿಷಕಾರಿ ರಾಸಾಯನಿಕ ಔಷಧ ಸಿಂಪಡಣೆ ಮಾಡಿದ ಪರಿಣಾಮ ಈರುಳ್ಳಿ ಬೆಳೆ ಒಣಗಿ ಹಾಳಾಗಿರುವುದು ತಾಲೂಕಿನ ಸಿದ್ಧನಾಥ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸಿದ್ದನಾಥ ಗ್ರಾಮದ ರೈತ ಭೀಮಪ್ಪ ಶಿವಬಸಪ್ಪ ಕುಬಕಡ್ಡಿ ಅವರ ಜಮೀನಿನಲ್ಲಿ ಬಿತ್ತನೆ ಮಾಡಿದ ಈರುಳ್ಳಿ (ಉಳ್ಳಾಗಡ್ಡಿ) ಬೆಳೆಗೆ ರಾತ್ರೋರಾತ್ರಿ ದುಷ್ಕರ್ಮಿಗಳು ರಾಸಾಯನಿಕ ಔಷಧ ಹೊಡೆದ ಪರಿಣಾಮ ಒಂದು ಎಕರೆ ಈರುಳ್ಳಿ ಬೆಳೆ ಹಾಳಾಗಿದೆ.

ರೈತ ಮಂಗಳವಾರ ತನ್ನ ಜಮೀನು ನೋಡಿಕೊಂಡು ಬರುವುದಕ್ಕೆ ಹೋದಾಗ ಈ ದೃಶ್ಯ ಬೆಳಕಿಗೆ ಬಂದಿದೆ. ಬೆಳೆ ಉತ್ತಮವಾಗಿ ಬಂದಿರುವುದನ್ನು ಸಹಿಸದ ದುಷ್ಕರ್ಮಿಗಳು ಕರಕಿ, ಕಸ ಸುಡುವ ಎಣ್ಣೆಯನ್ನು ಈರುಳ್ಳಿ ಬೆಳೆಗೆ ಹೊಡೆದಿದ್ದಾರೆ.

ರೈತ ಭೀಮಪ್ಪ ಕುಬಕಡ್ಡಿ ಮಾತನಾಡಿ, ಬ್ಯಾಂಕಿನಲ್ಲಿ ಲಕ್ಷಾಂತರ ರೂ. ಸಾಲ ಮಾಡಿದ್ದೇನೆ. ಈ ಬಾರಿ ಈರುಳ್ಳಿಗೆ ಒಳ್ಳೆಯ ಬೆಲೆ ಸಿಕ್ಕು ಸಾಲ ತೀರಿಸಬಹುದು ಎಂದುಕೊಂಡಿದ್ದೆ. ಬೆಳೆ ಹಾಳು ಮಾಡಿದ ಕುರಿತು ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ತಿಳಿಸಿದ್ದು, ಘಟನಾ ಸ್ಥಳಕ್ಕೆ ಕೊಲ್ಹಾರ ಪೋಲಿಸರು ಭೇಟಿ ನೀಡಿ ಹೋಗಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನನಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net