ಕೀಲಿ ಮುರಿದು ನಗ, ನಗದು ಕಳವು

crime
Published on

ಹುಬ್ಬಳ್ಳಿ: ಇಲ್ಲಿಯ ಮಂಟೂರು ರಸ್ತೆಯ ಶೀಲಾ ಕಾಲನಿಯ ಮನೆಯೊಂದ ಕೀಲಿ ಮುರಿದು 2.89 ಲಕ್ಷ ರೂ. ಮೌಲ್ಯದ ಆಭರಣ ಕಳವಾದ ಘಟನೆ ನಡೆದಿದೆ.

ಮಮತಾಜ್ ರಾಜೇಸಾಬ ಬೆಂಗಳೂರಿ ಅವರ ಮನೆಯಲ್ಲಿ ಕಳವಾಗಿದೆ. ಕೀಲಿ ಮುರಿದ ಕಳ್ಳರು 2.25 ಲಕ್ಷ ರೂ. ಮೌಲ್ಯದ 48.5 ಗ್ರಾಂ ಬಂಗಾರ, 54 ಸಾವಿರ ರೂ. ಮೌಲ್ಯದ 180 ಗ್ರಾಂ ಬೆಳ್ಳಿ ಹಾಗೂ 10 ಸಾವಿರ ನಗದು ಕಳವು ಮಾಡಿದ್ದಾರೆ. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net