ಖೇತಪಯ್ಯ ನಾರಾಯಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

4bkl2
Published on

ಭಟ್ಕಳ: ಇಲ್ಲಿನ ಮೂಡಭಟ್ಕಳದ ಪುರಾತನ ಶಿಲ್ಪಕಲೆ ಸೌಂದರ್ಯಕ್ಕೆ ಹೆಸರಾದ ಶ್ರೀ ಖೇತಪಯ್ಯ ನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮಾ.2 ರಿಂದ ಮಾ.4ರವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಸ್ಥಾನದ ಅಭಿವೃದ್ಧಿ ಮಂಡಳಿಯ ಗೌರವಾಧ್ಯಕ್ಷ ವೆಂಕಟೇಶ ತಿಮ್ಮಯ್ಯ ನಾಯ್ಕ ಹೇಳೀದರು.

ದೇವಸ್ಥಾನದ ಆವರಣದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಮಾ. 3 ರಂದು ಶ್ರೀ ನಾರಾಯಣ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಗುರುಪುರದ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ನೆರವೇರಿಸಲಾಗುವುದು. ಅಂದು ಮಧ್ಯಾಹ್ನ 1 ಗಂಟೆಯಿಂದ 3 ರವರೆಗೆ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು ಧಾರ್ಮಿಕ ಪ್ರವಚನ ಹಾಗೂ ಅಶೀರ್ವಚನ ನೀಡುವರು. ದೇವರಿಗೆ ಬೆಳ್ಳಿ ಕವಚ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ ಎಂದರು.

ಮಾ. 2 ಮತ್ತು 3 ರಂದು ಸಂಜೆ ಧರ್ಮರಕ್ಷಣೆ ಧರ್ಮಪ್ರಚಾರ ಸಭಾ ಕಾರ್ಯಕ್ರಮ ನಡೆಯಲಿದೆ. ಸಭೆಯಲ್ಲಿ ಎಲ್ಲ ಸಮಾಜದ ಹಾಗೂ ದೇವಸ್ಥಾನಗಳ ಪ್ರಮುಖರು ಉಪಸ್ಥಿತರಿರುವರು. ಜನರ ಸಹಕಾರದೊಂದಿಗೆ ಲೋಕ ಕಲ್ಯಾಣಾರ್ಥವಾಗಿ ನಡೆಯುವ ದೇವತಾ ಕಾರ್ಯಕ್ರಮಕ್ಕೆ ಎಲ್ಲ ಸದ್ಭಕ್ತರು ಆಗಮಿಸಬೇಕು ಎಂದರು.

ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟ್ರಮಣ ನಾಯ್ಕ, ಶ್ರೀನಿವಾಸ ನಾಯ್ಕ, ಈಶ್ವರ ನಾಯ್ಕ, ರವಿಚಂದ್ರ ನಾಯ್ಕ, ನಾಗರಾಜ ಶೆಟ್ಟಿ, ಕುಮಾರ ನಾಯ್ಕ, ತಿರುಮಲ ನಾಯ್ಕ, ಕೃಷ್ಣ ನಾಯ್ಕ, ಪ್ರಶಾಂತ ಶೆಟ್ಟಿ, ಮೋಹನ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net