

ಧಾರವಾಡ: ಅಖಿಲ ಭಾರತ ಶೂಟಿಂಗ್ ಅಸೋಸಿಯೇಷನ್‌ನಿಂದ ಗೋವಾದಲ್ಲಿ ಆ. 25ರಂದು ನಡೆಯಲಿರುವ ಅಖಿಲ ಭಾರತ ಮುಕ್ತ ಶೂಟಿಂಗ್ ಸ್ಪರ್ಧೆಗೆ ನಗರದ ಕೇಶವ ತೆಲಗು ಆಯ್ಕೆ ಆಗಿದ್ದಾರೆ. ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಕೇಶವ ತೆಲಗು, 10 ಮೀ. ಏರ್ ಪಿಸ್ತೂಲ್ ಎನ್‌ಆರ್ ಪ್ಯಾರಾ ವಿಭಾಗದಲ್ಲಿ ಕರ್ನಾಟಕ ಶೂಟಿಂಗ್ ಅಸೋಷಿಯೇಷನ್ ಸಂಸ್ಥೆಯನ್ನು ಪ್ರತಿನಿಽಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.