ಕೇಶವ ವಿದ್ಯಾಕೇಂದ್ರದಲ್ಲಿ ಶೈಕ್ಷಣಿಕ ಪ್ರದರ್ಶನ

IMG-20241224-WA0010.jpg
Published on

ಹುಬ್ಬಳ್ಳಿ: ಇಲ್ಲಿಯ ರೇಣುಕಾನಗರದ ಕೇಶವ ವಿದ್ಯಾಕೇಂದ್ರ ಶಾಲೆಯಲ್ಲಿ ವಾರ್ಷಿಕ ಶೈಕ್ಷಣಿಕ ವಿಜ್ಞಾನ ವಸ್ತು ಪ್ರದರ್ಶನ ಮಂಗಳವಾರ ಏರ್ಪಡಿಸಲಾಯಿತು.

ಮುಖ್ಯ ವಕ್ತಾರರಾಗಿದ್ದ ವೇದ ಗಣಿತಜ್ಞ ಶಿವಪ್ಪ ಕುಬಸದ ಅವರು, ಮಕ್ಕಳಿಗೆ ವೇದಗಣಿತದ ಮಹತ್ವ ತಿಳಿಸಿದರು. ಭಾರತದ ಪರಂಪರೆಯಲ್ಲಿ ವಿಜ್ಞಾನ, ಗಣಿತ ಸೂತ್ರಗಳು ಉಪನಿಷತ್ತುಗಳಲ್ಲಿ ನಾವು ನೋಡಬಹುದು, ನಮ್ಮ ಸನಾತನ ಧರ್ಮ, ಪೂರ್ವಜರು ಸಾವಿರಾರು ವರ್ಷಗಳ ಹಿಂದೆಯೆ ಗಣಿತದ ದಾಖಲೆ ಇರುವ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಶಾಲೆಯ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಆಡಳಿತಾಧಿಕಾರಿ ಶ್ರೀಧರಜೀ, ಮುಖ್ಯ ಶಿಕ್ಷಕಿ ಶರಾವತಿ ಮಾತಾಜೀ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net