ಕೇಶವ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಗೆ ದೀಕ್ಷೆ

IMG-20250306-WA0026.jpg
Published on

ಹುಬ್ಬಳ್ಳಿ: ಇಲ್ಲಿಯ ರೇಣುಕಾನಗರದ ಕೇಶವ ವಿದ್ಯಾ ಕೇಂದ್ರದಲ್ಲಿ ಗುರುವಾರ ಹತ್ತನೇ ವರ್ಗದ ವಿದ್ಯಾರ್ಥಿಗಳ ದೀಕ್ಷಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮುಖ್ಯ ವಕ್ತಾರರಾಗಿದ್ದ ರಾಷ್ಟ್ರಸೇವಿಕಾ ಸಮಿತಿ ವಿಜಯನಗರ ಪ್ರಾಂತದ ಸಹಕಾರ್ಯವಾಹಿಕಾ ಆಶಾ ನಾಯಕ, ಮಕ್ಕಳಿಗೆ ಶಿಕ್ಷಣದೊಂದಿಗೆ ಸಮಾಜ ಸೇವೆಯು ಅಷ್ಟೇ ಮುಖ್ಯವಾಗಿದೆ. ಸಮಾಜಕ್ಕಾಗಿ ಯುವಕರು ತಮ್ಮ ವೈಯಕ್ತಿಕ ಸಮಯವನ್ನು ಮೀಸಲಿಡಬೇಕು ಎಂದು ಹೇಳಿದರು.

ಭಾರತೀಯ ಪರಂಪರೆಯಲ್ಲಿ ಕುಟುಂಬ ವ್ಯವಸ್ಥೆಗೆ ಅತ್ಯಂತ ಮಹತ್ವವಿದೆ. ಮಕ್ಕಳು ಮುಂದಿನ ವಿದ್ಯಾಭ್ಯಾಸದೊಂದಿಗೆ ಸಂಸ್ಕೃತಿಗೂ ಆದ್ಯತೆ ನೀಡಬೇಕು ಎಂದರು.

ವಿದ್ಯಾ ಕೇಂದ್ರದ ಮುಖ್ಯ ಶಿಕ್ಷಕಿ ಶರಾವತಿ ಮಾತಾಜಿ ಅವರು ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.


ಶಾಲೆಯ ಮುಖ್ಯ ಆಡಳಿತ ಅಧಿಕಾರಿ ಶ್ರೀಧರ ಗುರೂಜಿ, ಕಮಲಾ ಮಾತಾಜಿ ಉಪಸ್ಥಿತರಿದ್ದರು. ದೇವಿಕಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಮಾತಾಜಿ ಸ್ವಾಗತಿಸಿದರು. ಜ್ಯೋತಿ ಮಾತಾಜಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net