ಮಲ್ಲಿಗೆಯಂಗಡಿ ಕೆಸರುಗದ್ದೆ ಕ್ರೀಡೋತ್ಸವ

New Project (33)
Published on

ಕಿನ್ನಿಗೋಳಿ: ಮಲ್ಲಿಗೆಯಂಗಡಿ ನಂದಿನಿ ಯುವಕ ಮಂಡಲ ವತಿಯಿಂದ ಸ್ವಾತಂತ್ರೊೃೀತ್ಸವ ಅಂಗವಾಗಿ ಕೆಸರುಗದ್ದೆ ಕ್ರೀಡೋತ್ಸವ ನಡೆಯಿತು. ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಮತ್ತು ವೆಂಕಟರಮಣ ಆಸ್ರಣ್ಣ ಆಶೀರ್ವಚನ ನೀಡಿದರು.

ಉಪನ್ಯಾಸಕಿ ಡಾ.ವಿನಿತಾ ಶೆಟ್ಟಿ ಕಟೀಲು, ಗ್ರಾಮದ ಶ್ರಮಿಕ ಮಹಿಳೆಯರನ್ನು ಗೌರವಿಸಲಾಯಿತು. ಹಿರಿಯ ಕೃಷಿಕರಾದ ಹರೀಶ್ ಶೆಟ್ಟಿ ಸಾಂತ್ಯ, ಧರ್ಮಪಾಲ ಶೆಟ್ಟಿ, ಬಾಬು ಶೆಟ್ಟಿ, ಪ್ರಭಾಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಕೊಡೆತ್ತೂರು ಅರಸುಕುಂಜರಾಯ ದೈವಸ್ಥಾನದ ಜಯರಾಮ ಮುಕಾಲ್ದಿ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಮುರ ಸದಾಶಿವ ಶೆಟ್ಟಿ, ಸೀತಾರಾಮ ರೈ, ಶ್ರೀನಿವಾಸ ಶೆಟ್ಟಿ ತಂಡ್ರಾಪು, ಧರ್ಮಪಾಲ ಶೆಟ್ಟಿ, ಪ್ರಕಾಶ್ ಕುಕ್ಯಾನ್, ಆದರ್ಶ್ ಶೆಟ್ಟಿ ಎಕ್ಕಾರ್, ಲೋಕಯ್ಯ ಸಾಲಿಯಾನ್ ಕೊಂಡೇಲ, ಗಣೇಶ್ ಶೆಟ್ಡಿ ಮಿತ್ತಬೈಲ್ ಗುತ್ತು, ಶ್ರೀಧರ ಅಳ್ವ ಮಾಗಂದಡಿ, ಗೀತಾ ಪೂಜಾರ್ತಿ, ನಂದಿನಿ ಮಹಿಳಾ ಮಂಡಲದ ಅಧ್ಯಕ್ಷೆ ಯೋಗಿನಿ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಗೌರವಾಧ್ಯಕ್ಷ ಈಶ್ವರ್ ಕಟೀಲ್ ಪ್ರಸ್ತಾವನೆಗೈದರು. ಸಂಸ್ಥೆಯ ಅಧ್ಯಕ್ಷ ಗುರುರಾಜ್ ಮಲ್ಲೆಗೆಯಂಗಡಿ ಸ್ವಾಗತಿಸಿದರು. ಪ್ರವೀಣ್ ಕೊಂಡೇಲ, ದುರ್ಗಾಪ್ರಸಾದ್ ಕೊಂಡೇಲ, ದುರ್ಗಾಪ್ರಸಾದ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net